ಬೆಳ್ತಂಗಡಿ ತಾಲೂಕು ಪಂಚಾಯತ್ ಕ್ವಾಟ್ರಸ್ ನಲ್ಲಿ ಬಾಲಕ ಆತ್ಮಹತ್ಯೆ

ಶೇರ್ ಮಾಡಿ

ಬೆಳ್ತಂಗಡಿ : ಬಾಲಕನೊರ್ವನ ತಾಲೂಕು ಪಂಚಾಯತ್ ಕ್ವಾಟ್ರಸ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಮೃತದೇಹ ಕಂಡು ಬಂದಿದೆ.
ಬೆಳ್ತಂಗಡಿ ಶಿಕ್ಷಣ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕೆಲಸ ಮಾಡುತ್ತಿರುವ ಮಂಜಳಾ ಅವರ ತಂಗಿ ಭಾಗ್ಯಮ್ಮ ಅವರ ಮಗ ಶಿವಪ್ರಸಾದ್ (15) ತಾಲೂಕು ಪಂಚಾಯತ್‌ನ ಪಕ್ಕದಲ್ಲಿರುವ ಸರಕಾರಿ ವಸತಿಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ವಸತಿಗೃಹಕ್ಕೆ ಮಧ್ಯಾಹ್ನ ಮಂಜುಳಾ ಕೆಲಸದಿಂದ ಬಂದಾಗ ಬಾಲಕ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿದ್ದ. ಈ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದು. ಬೆಳ್ತಂಗಡಿ ಸಬ್ ಇನ್ಸ್ಪೆಕ್ಟರ್ ಅರ್ಜುನ್ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದು. ಚಿತ್ರದುರ್ಗದಲ್ಲಿರುವ ಮನೆಯವರಿಗೆ ಮಾಹಿತಿ ನೀಡಲಾಗಿದ್ದು. ಮನೆಯವರು ಬರುವ ತನಕ ಮನೆಯನ್ನು ಬೀಗಹಾಕಿ ಇಡಲಾಗಿದೆ.

Leave a Reply

error: Content is protected !!