ಹಿರಿಯ ವಿದ್ಯಾರ್ಥಿಗಳು ಶೈಕ್ಷಣಿಕ ಸಂಸ್ಥೆಯ ರಾಯಭಾರಿ- ಶ್ರದ್ಧಾ ಅಮಿತ್

ಶೇರ್ ಮಾಡಿ

ಉಜಿರೆ: “ಶಿಕ್ಷಣ ಸಂಸ್ಥೆಗಳ ಹಿರಿಯ ವಿದ್ಯಾರ್ಥಿಗಳು ಅವುಗಳ ರಾಯಭಾರಿಗಳಾಗಿದ್ದು ಅಡಿಪಾಯವನ್ನು ಇನ್ನಷ್ಟು ಗಟ್ಟಿಗೊಳಿಸಲು ಕಾರಣರಾಗುತ್ತಾರೆ. ನಮ್ಮ ವ್ಯಕ್ತಿತ್ವದ ಬೆಳವಣಿಗೆಗೆ ಶಿಕ್ಷಣ ಸಂಸ್ಥೆಗಳು ನೀಡುವ ಉತ್ತಮ ವ್ಯವಸ್ಥೆಗಳು ಪೂರಕವಾಗುತ್ತವೆ” ಎಂದು ಉಜಿರೆ ಎಸ್ ಡಿ ಎಂ ಕಾಲೇಜಿನ ಹಿರಿಯ ವಿದ್ಯಾರ್ಥಿನಿ, ಬೆಂಗಳೂರು ಕ್ಷೇಮವನದ ನಿರ್ದೇಶಕಿ ಶ್ರದ್ಧಾ ಅಮಿತ್ ಹೇಳಿದರು.

ಅವರು ಸೋಮವಾರ ಉಜಿರೆ ಎಸ್ ಡಿ ಎಂ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

“ಗ್ರಾಮೀಣ ಭಾಗದ ವಿದ್ಯಾರ್ಥಿಗಳ ವಿದ್ಯೆಯ ಕನಸು ನನಸಾಗಲು ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳು ವರದಾನವಾಗಿವೆ. ಇಲ್ಲಿ ನಗರದ ಕಾಲೇಜುಗಳಿಗೆ ಸರಿಸಮಾನವಾದ ಶಿಕ್ಷಣ ವ್ಯವಸ್ಥೆ ಸಿಗುತ್ತಿದೆ. ಉಜಿರೆಯಲ್ಲಿ ನಡೆದ ತುಳು ಸಮ್ಮೇಳನ, ಮಕ್ಕಳ ಮೇಳ ಸೇರಿದಂತೆ ಅನೇಕ ಕಾರ್ಯಕ್ರಮಗಳಿಗೆ ಇಲ್ಲಿನ ಶಿಕ್ಷಣ ಸಂಸ್ಥೆಗಳು ಬೆನ್ನೆಲುಬಾಗಿವೆ” ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಿನ್ಸಿಪಾಲ್ ಡಾ.ಕುಮಾರ್ ಹೆಗ್ಡೆ ಬಿ.ಎ. ಮಾತನಾಡಿ “ಹಳೆ ನೆನಪುಗಳು ಮರುಕಳಿಸಲು ಹಿರಿಯ ವಿದ್ಯಾರ್ಥಿಗಳ ಸಮ್ಮಿಲನದಂತಹ ಕಾರ್ಯಕ್ರಮಗಳು ಅತಿ ಅಗತ್ಯವಾಗಿವೆ ಇಂತಹ ಕಾರ್ಯಕ್ರಮಗಳು ಅನುಬಂಧವನ್ನು ಇನ್ನಷ್ಟು ಹೆಚ್ಚಿಸಿ ಗೆಳೆತನವನ್ನು ಗಟ್ಟಿಗೊಳಿಸುತ್ತವೆ” ಎಂದರು.
ಹಿರಿಯ ವಿದ್ಯಾರ್ಥಿ ವೈದ್ಯ ಡಾ.ಪ್ರದೀಪ್ ಎ. ನಾವೂರು ಶುಭ ಹಾರೈಸಿದರು.

ಅಧ್ಯಕ್ಷ ಪೀತಾಂಬರ ಹೆರಾಜೆ ಸ್ವಾಗತಿಸಿದರು. ಕಾರ್ಯದರ್ಶಿ ಧನಂಜಯ ರಾವ್ ಬಿ.ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಧರ ಕೆ.ವಿ. ವಂದಿಸಿದರು. ಉಪನ್ಯಾಸಕ ದಿವಾಕೊಕ್ಕಡ ಕಾರ್ಯಕ್ರಮ ನಿರೂಪಿಸಿದರು.

ಅಭಿನಂದನೆ
ಹಿರಿಯ ವಿದ್ಯಾರ್ಥಿನಿ ಶ್ರದ್ಧಾ ಅಮಿತ್ ಅವರನ್ನು ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಅಭಿನಂದಿಸಲಾಯಿತು. ಮಂಗಳೂರು ಬಲ್ಮಠ ಕಾಲೇಜಿನ ಉಪನ್ಯಾಸಕ ಡಾ.ಮಾಧವ ಎಂ.ಕೆ. ಅಭಿನಂದನಾ ಭಾಷಣ ನೆರವೇರಿಸಿದರು. ಹಿರಿಯ ವಿದ್ಯಾರ್ಥಿಗಳಿಂದ ಮನರಂಜನೆ ಕಾರ್ಯಕ್ರಮ ಜರಗಿತು.

ನೆನಪಿನಂಗಳ. ಎಸ್‌ ಡಿ ಎಂ ಕಾಲೇಜಿನ
ಹಿರಿಯ ವಿದ್ಯಾರ್ಥಿ ಸಂಘವು ಪ್ರತಿ ತಿಂಗಳು ನೆನಪಿನಂಗಳ ಎಂಬ ಕಾರ್ಯಕ್ರಮವನ್ನು ಕಾಲೇಜಿನ ಸಹಕಾರದಲ್ಲಿ ಆಯೋಜಿಸುತ್ತಿದೆ. ಇದು ಸಾಧಕ ಹಿರಿಯ ವಿದ್ಯಾರ್ಥಿಗಳು ಪ್ರಸ್ತುತ ವಿದ್ಯಾಭ್ಯಾಸ ಕೈಗೊಂಡಿರುವ ವಿದ್ಯಾರ್ಥಿಗಳಿಗೆ ವಿಶೇಷ ಮಾರ್ಗದರ್ಶನ ನೀಡುವ ಕಾರ್ಯಕ್ರಮವಾಗಿದೆ. ಇದರಲ್ಲಿ ಆಯ್ದ ಓರ್ವ ವಿದ್ಯಾರ್ಥಿಗೆ ಸಂಘದ ವತಿಯಿಂದ ಪ್ರತಿ ತಿಂಗಳು ರೂ.5,000 ಪ್ರೋತ್ಸಾಹ ಧನ ನೀಡಲಾಗುತ್ತಿದೆ.

Leave a Reply

error: Content is protected !!