ಕೊಕ್ಕಡ: ಕೊಕ್ಕಡದ ಸಂತ ಜಾನ್ ಬ್ಯಾಪ್ಟೀಸ್ಟ್ ಚರ್ಚ್ ಹಾಗೂ ಕೊಕ್ಕಡದ ಬದ್ರಿಯಾ ಜುಮಾ ಮಸೀದಿಗೆ ಕರ್ನಾಟಕ ಸರ್ಕಾರದ ಮಾಜಿ ಮುಖ್ಯ ಸಚೇತಕರಾದ ಐವನ್ ಡಿಸೋಜಾ ಹಾಗೂ ಕೇರಳದ ಇರ್ಕೂರ್ ಶಾಸಕರಾದ ಸಜೀವ್ ಜೋಸೆಫ್ ಇವರು ಇಂದು(ಮೇ.02)
ಭೇಟಿ ನೀಡಿ ಧಾರ್ಮಿಕ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದರು.
ಈ ಸಂದರ್ಭದಲ್ಲಿ ಚರ್ಚಿನ ಧರ್ಮ ಗುರುಗಳಾದ Fr. ಜಗದೀಶ್ ಲೂಯಿಸ್ ಪಿಂಟೋ, ಕೊಕ್ಕಡ ಗ್ರಾಮ ಪಂಚಾಯಿತಿನ ಮಾಜಿ ಅಧ್ಯಕ್ಷ ವಿ.ಜೆ.ಸೆಬಾಸ್ಟಿನ್, ಮಸೀದಿಯ ಪದಾಧಿಕಾರಿಗಳು ಹಾಗೂ ಕೊಕ್ಕಡದ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.