ಲಾರಿಯ ಹಿಂಭಾಗಕ್ಕೆ ಟಿಪ್ಪರ್ ಲಾರಿ ಅಪಘಾತ: ಇಬ್ಬರಿಗೆ ಗಂಭೀರ ಗಾಯ

ಶೇರ್ ಮಾಡಿ

ಗೋಳಿತೊಟ್ಟು: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಗೋಳಿತೊಟ್ಟು ಗ್ರಾಮದ ಸಣ್ಣಂಪಾಡಿ ಎಂಬಲ್ಲಿ ಲಾರಿಯ ಹಿಂಭಾಗಕ್ಕೆ ಟಿಪ್ಪರ್ ಲಾರಿ ಅಪಘಾತವಾಗಿ ಟಿಪ್ಪರ್ ಲಾರಿ ಚಾಲಕ ಹಾಗೂ ಕ್ಲೀನರ್ ಗಂಭೀರ ಗಾಯಗೊಂಡ ಘಟನೆ ಮೇ.01 ರಂದು ಸಂಭವಿಸಿದೆ.

ಗಾಯಗೊಂಡ ಟಿಪ್ಪರ್ ಲಾರಿ ಚಾಲಕ ಲೋಹಿತ್, ಕ್ಲೀನರ್ ಪ್ರವೀಣ ಎಂದು ಗುರುತಿಸಲಾಗಿದೆ.
ನೆಲ್ಯಾಡಿ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಚಲಾಯಿಸಿಕೊಂಡುಬರುತ್ತಿದ್ದ ಟಿಪ್ಪರ್ ಲಾರಿ ಚಾಲಕ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ರಸ್ತೆಯ ತೀರ ಎಡಭಾಗಕ್ಕೆ ಚಲಿಸಿದ ಪರಿಣಾಮ ಗೋಳಿತೊಟ್ಟು ಗ್ರಾಮದ ಸಣ್ಣಂಪಾಡಿ ಎಂಬಲ್ಲಿ ಕೆಟ್ಟು ನಿಂತು ದುರಸ್ತಿಯಲ್ಲಿದ್ದ ಲಾರಿಗೆ ಹಿಂಭಾಗಕ್ಕೆ ಟಿಪ್ಪರ್ ಲಾರಿ ಡಿಕ್ಕಿಯಾಗಿದೆ. ಚಾಲಕ ಮತ್ತು ಕ್ಲೀನರ್ ಗಾಯಗೊಂಡು ಅವರನ್ನು ಮಂಗಳೂರಿನ ಎ.ಜೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಅಪಘಾತದಿಂದ ಎರಡು ವಾಹನಗಳು ಜಖಂ ಗೊಂಡಿವೆ.
ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply

error: Content is protected !!