ಕೊಕ್ಕಡ: ಇಲ್ಲಿನ ತೆಂಕುಬೈಲು ಪಿಲಿ ಚಾಮುಂಡಿ ದೇವಸ್ಥಾನದಲ್ಲಿ ಪ್ರಕೃತಿ ವಿಕೋಪಕ್ಕೆ ಸವಾಲಾಗಿನಿಂತ ದೈವದ ಕಾರ್ಣಿಕ.
ಮೇ.10ರ ರಾತ್ರಿ ಈ ಪರಿಸರದಲ್ಲಿ ವಿಪರೀತ ಗಾಳಿಗೆ ದೇವಸ್ಥಾನದ ಆವರಣದಲ್ಲಿ ಇರುವ ಹಳೇ ಕಾಲದ ನೆಲ್ಲಿಕಾಯಿಯ ಮರದ ದೊಡ್ಡ ಕೊಂಬೆ ದೈವಸ್ಥಾನದ ಮೇಲೆ ವಾಲಿ ಕೊಂಡು ಇದ್ದರೂ ನಿನ್ನೆ ನಡೆದ ಗಾಳಿಯ ರಭಸಕ್ಕೆ ಎರಡು ದೈವಗಳ ಕಟ್ಟೆಗಳ ಮಧ್ಯೆ ಯಾವುದೇ ಹಾನಿ ಮಾಡದೇ ತಿರುಗಿ ಬಿದ್ದು ದೈವದ ಕಾರ್ಣಿಕವನ್ನು ತೋರಿಸಿ ಕೊಟ್ಟಿದ್ದು, ಕೆಲವು ವರ್ಷಗಳ ಹಿಂದೆ ಇದೇ ತರಹ ದೊಡ್ಡ ಕಾಸರ್ಕಣ ಮರ ಕೂಡ ಬಿದ್ದು ದೈವಗಳು ತಮ್ಮ ಗುಡಿಗಳನ್ನು ರಕ್ಷಿಸಿ ಕೊಂಡು ತಮ್ಮ ಕಾರ್ಣಿಕ ವನ್ನು ತೋರಿಸಿ ಕೊಟ್ಟಿದೆ.
ಇಲ್ಲಿ ಈ ವರ್ಷದ ವಾರ್ಷಿಕ ಪತ್ತನಾಜೆ ನೇಮೋತ್ಸವ ಮೇ.24ರ ರಾತ್ರಿಯಿಂದ ಪ್ರಾರಂಭಗೊಂಡು ಮೇ.25ರಂದು ಸಂಜೆಯವರೆಗೆ ನೇಮೋತ್ಸವ ನಡೆಯಲಿದೆ.