ದ.ಕ.ಜಿಲ್ಲಾದ್ಯಂತ ಗುಡುಗು ಸಹಿತ ಭಾರೀ ಮಳೆ

ಶೇರ್ ಮಾಡಿ

ದ.ಕ.ಜಿಲ್ಲೆಯ ಮಂಗಳೂರು, ಬೆಳ್ತಂಗಡಿ, ಪುತ್ತೂರು, ಸುಳ್ಯ, ಬಂಟ್ವಾಳ ತಾಲೂಕಿನ ವಿವಿಧೆಡೆ ಗುರುವಾರ ರಾತ್ರಿ ಗುಡುಗು ಸಹಿತ ಭಾರೀ ಮಳೆಯಾಗಿದೆ.

ವಾಯುಭಾರ ಕುಸಿತದಿಂದಾಗಿ ಮುಂಗಾರುಪೂರ್ವ ಮಳೆಯು ಬಿರುಸು ಪಡೆದಿದ್ದು, ಗುರುವಾರ ರಾತ್ರಿ ಹಲವು ಕಡೆಗಳಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆ ಸುರಿದಿದೆ.
ಎಡಬಿಡದೆ ಸುರಿದ ರಭಸದ ಮಳೆ ಮತ್ತು ಮಿಂಚು ಸಹಿತ ಸಿಡಿಲಿನ ಆರ್ಭಟಕ್ಕೆ ಸಾರ್ವಜನಿಕರು, ದ್ವಿಚಕ್ರ ವಾಹನಿಗರಲ್ಲದೆ ಸಾರ್ವಜನಿಕರು ಸಕಾಲಕ್ಕೆ ವಾಸಸ್ಥಾನಕ್ಕೆ ತಲುಪಲಾಗದೆ ಪರದಾಡುವಂತಾಗಿದೆ.
ನಾನಾ ಕಡೆ ಬಿರುಸಿನ ಮಳೆಯಾಗಿದ್ದು, ಬಿಸಿಲ ಬೇಗೆಯಿಂದ ತತ್ತರಿಸುತ್ತಿದ್ದ ಜನತೆ ತುಸು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

See also  ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಮಂಗಳೂರು ವಿವಿ ಮಟ್ಟದ ಅಂತರ್ ಕಾಲೇಜು ಹಗ್ಗಜಗ್ಗಾಟ ಸ್ಪರ್ಧೆ

Leave a Reply

Your email address will not be published. Required fields are marked *

error: Content is protected !!