ಮಾಯಿಲಕೋಟೆ ಸೀಮೆ ದೈವಸ್ಥಾನ ಕೊಕ್ಕಡದಲ್ಲಿ ದೈವಗಳ ಪ್ರಥಮ ವಾರ್ಷಿಕ ನೇಮೋತ್ಸವ|

ಶೇರ್ ಮಾಡಿ

ಕೊಕ್ಕಡ: ಬೆಳ್ತಂಗಡಿ ತಾಲೂಕಿನ ಕೊಕ್ಕಡದ ಮಾಯಿಲಕೋಟೆ ಸೀಮೆ ದೈವಸ್ಥಾನ ಟ್ರಸ್ಟ್ (ರಿ) ನ ದೈವಗಳ ಪ್ರಥಮ ವಾರ್ಷಿಕ ನೇಮೋತ್ಸವ ಮೇ.13ನೇ ಶನಿವಾರದಿಂದ ಮೇ.14ರ ಆದಿತ್ಯವಾರ ಬೆಳಗ್ಗೆ 8:00ವರೆಗೆ ನೆರವೇರಲಿದೆ.

ಮೇ.12ರ ಶುಕ್ರವಾರ ಸಂಜೆ ಗಂಟೆ 7.00ರಿಂದ ದುರ್ಗಾನಮಸ್ಕಾರ ಪೂಜೆ, ರಾತ್ರಿ ಅನ್ನಸಂತರ್ಪಣೆ, ಮೇ.13ನೇ ಶನಿವಾರ ಬೆಳಗ್ಗೆ ಗಂಟೆ 7:00ಕ್ಕೆ ಗಣಹೋಮ, ಐಕ್ಯಸೂಕ್ತ ಹೋಮ, ಭಾಗ್ಯಸೂಕ್ತ ಹೋಮ, ನವಕ ಕಲಶ ಮತ್ತು ದೈವಗಳಿಗೆ ತಂಬಿಲ ಸೇವೆ. ಗಂಟೆ 7.00 ರಿಂದ ವಿವಿಧ ತಂಡಗಳಿಂದ ಭಜನಾ ಕಾರ್ಯಕ್ರಮ, ಗಂಟೆ 9:00ಕ್ಕೆ ಹಸಿರು ಹೊರೆಕಾಣಿಕೆ ಸಮರ್ಪಣೆ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಗಂಟೆ 7:00 ರಿಂದ ಶ್ರೀ ಕಲ್ಲುರ್ಟಿ, ವರ್ಣಾರ ಪಂಜುರ್ಲಿ, ಕೋಟೆ ಚಾಮುಂಡಿ ಮತ್ತು ಗುಳಿಗ ದೈವಗಳ ನೇಮೋತ್ಸವ, ರಾತ್ರಿ ಮಹಾ ಅನ್ನಸಂತರ್ಪಣೆ ಜರಗಲಿರುವುದು.

ಎಂದು ಮಾಯಿಲಕೋಟೆ ಸೀಮೆ ದೈವಸ್ಥಾನ ಟ್ರಸ್ಟ್ (ರಿ)ನ ಅಧ್ಯಕ್ಷರಾದ ರಾಮಕೃಷ್ಣ ದೇವಾಡಿಗ, ಉತ್ಸವ ಸಮಿತಿಯ ಅಧ್ಯಕ್ಷರಾದ ಕುಶಾಲಪ್ಪ ಗೌಡ ಪೂವಾಜೆ, ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಾಂತರಾಮ ಎ. ನ್ಯೂ ಅರಿಗ, ಶ್ರೀ ವೈದ್ಯನಾಥೇಶ್ವರ ದೇವಸ್ಥಾನ ಕೊಕ್ಕಡದ ಪವಿತ್ರಪಾಣಿ ರಾಧಾಕೃಷ್ಣ ಯಡಪಡಿತ್ತಾಯ ಹಾಗೂ ಮಾಯಿಲಕೋಟೆ ಸೀಮೆ ದೈವಸ್ಥಾನ ಟ್ರಸ್ಟ್ (ರಿ)ನ ಸರ್ವಸದಸ್ಯರುಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

error: Content is protected !!