ಕೊಕ್ಕಡ: ಶಶಿಕಾಂತ ಕಾಣೆ: ಪತ್ನಿಯಿಂದ ದೂರು

ಶೇರ್ ಮಾಡಿ

ಕೊಕ್ಕಡ : ಕಡಬ ತಾಲೂಕು ಕೌಕ್ರಾಡಿ ಗ್ರಾಮದ ಪಾಲೇಲೆ ನಿವಾಸಿ ಶಶಿಕಾಂತ(26) ಎಂಬವರು ಕಾಣೆಯಾಗಿರುವ ಬಗ್ಗೆ ಆತನ ಪತ್ನಿ ದಿವ್ಯ ಎಂಬವರು ಉಪ್ಪಿನಂಗಡಿ ಪೋಲಿಸರಿಗೆ ದೂರು ನೀಡಿದ್ದಾರೆ.

ಶಶಿಕಾಂತ ರವರು ಮೇ.13ರ ರಂದು ಬೆಳಗ್ಗೆ 7:00ಗಂಟೆಗೆ ಬೆಳ್ತಂಗಡಿ ತಾಲೂಕು ಪಟ್ರಮೆ ಎಂಬಲ್ಲಿಗೆ ಹೋಗಿ ಬರುತ್ತೇನೆಂದು ಹೇಳಿ ಬೈಕ್ ತೆಗೆದುಕೊಂಡು ಹೋಗಿರುತ್ತಾರೆ, ಮಧ್ಯಾಹ್ನ 12.00ಗಂಟೆಗೆ ಮೊಬೈಲಿಗೆ ಕರೆ ಮಾಡಿದಾಗ ನೆಲ್ಯಾಡಿಯಲ್ಲಿ ಇರುವುದಾಗಿ ತಿಳಿಸಿ ಮಧ್ಯಾಹ್ನ 2.00ಗಂಟೆಗೆ ಮನೆಗೆ ಬರುತ್ತೇನೆ ಎಂದು ಹೇಳಿದವರು ಮನೆಗೆ ಬಾರದೇ ಇದ್ದುದ್ದರಿಂದ ಪುನಃ ಕರೆ ಮಾಡಿದಾಗ ಫೋನ್ ಸ್ವಿಚ್ ಆಫ್ ಬರುತ್ತಿತ್ತು. ರಾತ್ರಿಯಾದರೂ ಮನೆಗೆ ಬಾರದೆಯಿದುದರಿಂದ, ಶಶಿಕಾಂತನ ಸ್ನೇಹಿತರಿಗೆ, ನೆರೆಕರೆಯವರಿಗೆ ತಿಳಿಸಿ ಎಲ್ಲಾ ಕಡೆಯಲ್ಲಿ ಹುಡುಕಾಡಿದ್ದಾರೆ ಪತ್ತೆಯಾಗಲಿಲ್ಲ, ಮನೆಗೂ ಬರಲಿಲ್ಲ, ಕಾಣೆಯಾದ ಶಶಿಕಾಂತರನ್ನು ಪತ್ತೆ ಮಾಡಿಕೊಡುವಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಆತನ ಪತ್ನಿ ದಿವ್ಯ ರವರು ದೂರಿನಲ್ಲಿ ತಿಳಿಸಿದ್ದಾರೆ.
ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

error: Content is protected !!