ಪುತ್ತೂರು ಪೊಲೀಸರ ದೌರ್ಜನ್ಯ ಕೇಸ್ – ಪಿಎಸ್ಐ ಶ್ರೀನಾಥ ರೆಡ್ಡಿ , ಪಿಸಿ ಹರ್ಷಿತ್ ಅಮಾನತು

ಶೇರ್ ಮಾಡಿ

ಪುತ್ತೂರು: ಪುತ್ತೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ್ ಕಟೀಲ್ ಹಾಗೂ ಸಂಸದ ಸದಾನಂದ ಗೌಡ ಅವರ ಚಿತ್ರವಿದ್ದ ಬ್ಯಾನರ್ ಗೆ ಚಪ್ಪಲಿ ಹಾರ ಹಾಕಿದ ಪ್ರಕರಣದಲ್ಲಿ ಆರೋಪಿಗಳ ಮೇಲೆ ಪೊಲೀಸ್ ದೌರ್ಜನ್ಯ ಘಟನೆಗೆ ಸಂಬಂಧಿಸಿದಂತೆ ಕೊನೆಗೂ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗಿದ್ದು, ಓರ್ವ ಸಬ್ ಇನ್ಸ್‌ಪೆಕ್ಟರ್ ಹಾಗೂ ಓರ್ವ ಕಾನ್ಸ್‌ಟೇಬಲ್ ಅಮಾನತು ಮಾಡಲಾಗಿದೆ.

ಪುತ್ತೂರು ಗ್ರಾಮಾಂತರ ಸಬ್ ಇನ್ಸ್ಪೆಕ್ಟರ್ ಶ್ರೀನಾಥ ರೆಡ್ಡಿ ಹಾಗೂ ನಗರ ಠಾಣೆ ಕಾನ್ಸ್‌ಟೇಬಲ್ ಹರ್ಷಿತ್ ಅವರನ್ನು ಅಮಾನತು ಮಾಡಿ ದ.ಕ ಜಿಲ್ಲಾ ಎಸ್ಪಿ ವಿಕ್ರಂ ಅಮಾಟೆ ಆದೇಶ ಹೊರಡಿಸಿದ್ದಾರೆ. ಡಿವೈಎಸ್ಪಿ ವೀರಯ್ಯ ಹಿರೇಮಠ್ ಗೆ ರಜೆಯ ಮೇಲೆ ಕಳುಹಿಸಿದ ಎಸ್ಪಿ, ಮೇಲಾಧಿಕಾರಿಗಳಿಗೆ ಡಿವೈಎಸ್ಪಿ ವಿರುದ್ದ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಿದ್ದಾರೆ. ಈ ನಡುವೆ ಮೂವರು ಪೊಲೀಸರ ವಿರುದ್ದ ಪುತ್ತೂರು ನಗರ ಠಾಣೆಯಲ್ಲಿ ಎಫ್ ಆರ್ ದಾಖಲಿಸಿದ್ದು, ಬಂಟ್ವಾಳ ಉಪವಿಭಾಗ ಡಿವೈಎಸ್ಪಿ ಧರ್ಮಪ್ಪ ಅವರ ನೇತೃತ್ವದಲ್ಲಿ ಪೊಲೀಸರ ವಿರುದ್ಧ ತನಿಖೆ ನಡೆಯಲಿದೆ.
ಪೊಲೀಸ್ ದೌರ್ಜನ್ಯ ಘಟನೆ ಸಂಬಂಧಿಸಿ ಎಸ್ಪಿ ವಿಕ್ರಂ ಪುತ್ತೂರಿನಲ್ಲೇ ಬೀಡುಬಿಟ್ಟಿದ್ದು, ಘಟನೆ ಹಿನ್ನಲೆಯಲ್ಲಿ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿರುವುದರಿಂದ ತುರ್ತಾಗಿ ಕ್ರಮ ಕೈಗೊ್ಳ್ಳಲಾಗಿದೆ
ಹಲ್ಲೆಗೊಳಗಾದ ಹಿಂದೂ ಕಾರ್ಯಕರ್ತ ಅವಿನಾಶ್ ದೂರಿನ ಹಿನ್ನೆಲೆ ಎಫ್‌ಐಆರ್ ದಾಖಲಾಗಿದೆ.

Leave a Reply

error: Content is protected !!