ಸುಳ್ಯ: ಯೋಗಾಸನದಲ್ಲಿ ದೀಕ್ಷಾ ಎಲಿಮಲೆ ಇಂಡಿಯಾ ಬುಕ್ ಆಫ್ ರೆಕಾರ್ಡ್

ಶೇರ್ ಮಾಡಿ

ನೇಸರ ಜ.6: ಎಲಿಮಲೆಯ ಹೂ ವ್ಯಾಪಾರಿ ಸಿದ್ದಲಿಂಗ ರವರ ಪುತ್ರಿ ದೀಕ್ಷಾ ಎಲಿಮಲೆ ಇವರು ಯೋಗಾಸನದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಹೆಸರು ಮಾಡಿದ್ದಾಳೆ.


ಭುನಮನಸನದಲ್ಲಿ 1 ಗಂಟೆ 10 ಸೆಂಕೆಡ್ ಒಂದೇ ಸ್ಥಿತಿಯಲ್ಲಿ ಇರುವ ಮೂಲಕ ದಾಖಲೆ ಮಾಡಿದ್ದಾಳೆ.
ಕಳೆದ 8 ತಿಂಗಳಿಂದ ಆನ್ಲೈನ್ ನ ಮೂಲಕ ಸುಳ್ಯದ ನಿರಂತರ ಯೋಗ ಕೇಂದ್ರದ ಯೋಗ ಶಿಕ್ಷಕ ಶರತ್ ಮರ್ಗಿಲಡ್ಕರವರ ಮಾರ್ಗದರ್ಶನ ದಲ್ಲಿ ಯೋಗಾಭ್ಯಾಸವನ್ನು ಕಲಿಯುತ್ತಿದ್ದಾಳೆ.
ಯೋಗ ಸ್ಪರ್ಧೆಯಲ್ಲಿ ಹಲವಾರು ಪ್ರಶಸ್ತಿ ಪಡೆದಿರುವ ಈಕೆ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೇವಚಳ್ಳದಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.

ಜಾಹೀರಾತು

Leave a Reply

error: Content is protected !!