ಮಳೆ-ಗಾಳಿ ಅಬ್ಬರ: ಕಾರಿನ ಮೇಲೆ ಬಿದ್ದ ಬೃಹತ್ ಗಾತ್ರದ ಮರ, ತಪ್ಪಿದ ಅನಾಹುತ

ಶೇರ್ ಮಾಡಿ

ಚಿಕ್ಕಮಗಳೂರು: ಶೃಂಗೇರಿ ಸುತ್ತಮುತ್ತ ಗಾಳಿ ಮಳೆಯ ಅಬ್ಬರ ಜೋರಾಗಿದ್ದು ಪರಿಣಾಮ ಮನೆಯ ಮುಂದೆ ನಿಲ್ಲಿಸಿದ್ದ ಕಾರಿನ ಮೇಲೆ ಬೃಹತ್ ಗಾತ್ರದ ಮರವೊಂದು ಬಿದ್ದ ಘಟನೆ ಶೃಂಗೇರಿ ತಾಲೂಕಿನ ಕುಂಚೇಬೈಲು ಗ್ರಾಮದಲ್ಲಿ ಮಂಗಳವಾರ ಸಂಭವಿಸಿದೆ.

ಕಟ್ಟಡ ಗುತ್ತಿಗೆದಾರ ಪ್ರದೀಪ್ ಎಂಬುವರಿಗೆ ಸೇರಿದ ಕಾರು ಇದಾಗಿದ್ದು ತೋಟದ ಕೆಲಸಕ್ಕೆ ಜನರನ್ನು ಕರೆದೊಯ್ಯುತ್ತಿದ್ದರು ಎನ್ನಲಾಗಿದೆ ಮಧ್ಯಾಹ್ನವಾದ ಕಾರಣ ಮನೆಗೆ ಊಟಕ್ಕೆ ಬಂದಿದ್ದರು ಈ ವೇಳೆ ಜೋರಾಗಿ ಸುರಿದ ಗಾಳಿ ಮಳೆಗೆ ಭಾರಿ ಗಾತ್ರದ ಮರವೊಂದು ಕಾರಿನ ಮೇಲೆ ಬಿದ್ದಿದೆ ಪರಿಣಾಮ ಶೃಂಗೇರಿ -ಚಿಕ್ಕಮಗಳೂರು ರಸ್ತೆ ಕೆಲ ಕಾಲ ಬಂದ್ ಆಗಿದೆ.

ಮರ ಬೀಳುವ ವೇಳೆ ಕಾರಿನಲ್ಲಿ ಯಾರು ಇಲ್ಲದಿದ್ದುದರಿಂದ ಸಂಭವನೀಯ ಅವಘಡ ತಪ್ಪಿದಂತಾಗಿದೆ.

Leave a Reply

error: Content is protected !!
%d bloggers like this: