ಬೈಕ್ – ಕಾರು ಅಪಘಾತ; ಗಾಯಾಳು ಗೋಳಿತೊಟ್ಟು ನಿವಾಸಿ ಅಶೋಕ್ ಮೃತ್ಯು

ಶೇರ್ ಮಾಡಿ

ನೆಲ್ಯಾಡಿ : ಮೇ 18ರಂದು ಕೊಕ್ಕಡ ಗ್ರಾಮದ ಉಪ್ಪಾರಪಳಿಕೆ ಸೇತುವೆ ಸಮೀಪ ಬೈಕ್ ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗೋಳಿತೊಟ್ಟು ಸಮೀಪದ ಕೊಣಾಲು ಗ್ರಾಮದ ಪೆರಣ ನಿವಾಸಿ, ಅಶೋಕ್(38ವ.) ಅವರು ಮೇ 24ರಂದು ಬೆಳಿಗ್ಗೆ ಮೃತ ಪಟ್ಟಿದ್ದಾರೆ.

ಮೃತ ಬೈಕ್ ಸವಾರ ಅಶೋಕ್ ಅವರು ಕೆಎಸ್ ಆರ್ ಟಿಸಿ ಬಸ್ ಚಾಲಕನಾಗಿದ್ದು, ಕರ್ತವ್ಯ ಮುಗಿಸಿ ಧರ್ಮಸ್ಥಳದಿಂದ ಉಪ್ಪಾರಪಳಿಕೆ ಮಾರ್ಗವಾಗಿ ಬೈಕ್ ನಲ್ಲಿ ಮನೆಗೆ ಬರುತ್ತಿದ್ದ ಸಂದರ್ಭ ಉಪ್ಪಿನಂಗಡಿಯಿಂದ ಉಪ್ಪಾರಪಳಿಕೆಯ ಕಡೆಗೆ ಬರುತ್ತಿದ್ದ ಉಪ್ಪಿನಂಗಡಿ ಮೂಲದ ಉದ್ಯಮಿಯೊಬ್ಬರ ಕಾರು ಡಿಕ್ಕಿಯಾಗಿತ್ತು. ಗಂಭೀರ ಗಾಯಗೊಂಡಿದ್ದ ಅಶೋಕ್ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಮೇ 24 ರಂದು ಅಸುನೀಗಿದ್ದಾರೆ.
ಮೃತರು ತಂದೆ ಮೋನಪ್ಪ ಗೌಡ, ತಾಯಿ, ಪತ್ನಿ ಗೋಳಿತ್ತೊಟ್ಟು ಗ್ರಾಮ ಪಂಚಾಯತ್ ಸದಸ್ಯೆ ಶೃತಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Leave a Reply

error: Content is protected !!