ಅಡ್ಡಾದಿಡ್ಡಿ ವಾಹನ ಚಲಾಯಿಸಿದ ನಾಲ್ವರ ವಿರುದ್ದ ಕೇಸು, ವಾಹನ ಪೊಲೀಸ್ ವಶಕ್ಕೆ

ಶೇರ್ ಮಾಡಿ

ಕಾಪು: ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಅಡ್ಡಾದಿಡ್ಡಿಯಾಗಿ‌ ವಾಹನ ಚಲಾಯಿಸಿ ಸಾರ್ವಜನಿಕ ಸಂಚಾರಕ್ಕೆ ತೊಡಕು ಉಂಟು ಮಾಡಿದ ನಾಲ್ವರು ಕಾರು ಚಾಲಕರ ಮೇಲೆ ಕಾಪು ಪೋಲಿಸರು ಕೇಸ್ ದಾಖಲಿಸಿದ್ದಾರೆ.

ವಾಹನ ಚಾಲಕರಾದ ಗುಡ್ಡೆಯಂಗಡಿ ಉದ್ಯಾವರ ಗ್ರಾಮ ಅಯಾನ್ (24), ಕುಂಜಿಬೆಟ್ಟು ಮಿಶಾಲ್ವುದ್ದೀನ್ (23), ಉಡುಪಿಯ ಹೈಕ ಬಿಲ್ಡಿಂಗ್ ಶಾನೂನ್ ಡಿಸೋಜಾ (25), ಕೊಡಂತೂರು 10ನೇ ಕ್ರಾಸ್ ವಿವೇಕ್ (23) ಎಂಬ ನಾಲ್ವರ ವಿರುದ್ದ ಕೇಸು ದಾಖಲಿಸಿದ್ದರೆ.

ಮೇ.23ರಂದು ಕಾಪು ಠಾಣಾ ಪಿಎಸ್ಐ ಸುಮಾ ಇವರಿಗೆ ಓರ್ವರು ಕರೆಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಕಾಪು ಪೊಲೀಸ್‌ ಠಾಣಾ ವ್ಯಾಪ್ತಿಯ ರಾ.ಹೆ 66 ರಸ್ತೆಯಲ್ಲಿ 1 ಜೀಪು ಹಾಗೂ 3 ಕಾರುಗಳನ್ನು ಅದರ ಚಾಲಕರುಗಳು ಅತೀ ವೇಗ ಮತ್ತು ತೀವ್ರ ಅಜಾಗರೂಕತೆಯಿಂದ ಸಾರ್ವಜನಿಕರ ಪ್ರಾಣಕ್ಕೆ ಅಪಾಯಕರವಾಗುವ ರೀತಿಯಲ್ಲಿ ರಸ್ತೆಯ ತುಂಬಾ ಅಡ್ಡದಿಡ್ಡಿಯಾಗಿ ಚಲಾಯಿಸಿಕೊಂಡು ಹೋಗುತ್ತಿದ್ದ ವಿಡಿಯೋ ವೈರಲ್‌ ಆಗುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು.

ಈ ಬಗ್ಗೆ ಸಾಮಾಜಿಕ ಜಾಲತಾಣಗಳನ್ನು ಪರಿಶೀಲಿಸಿ ವಿಡಿಯೋದಲ್ಲಿನ ಸ್ಥಳವು ಕಾಪು ಪೊಲೀಸ್‌ ಠಾಣಾ ವ್ಯಾಪ್ತಿಯ ಮೂಡಬೆಟ್ಟು ಗ್ರಾಮದಿಂದ ಮೂಳೂರು ಗ್ರಾಮದವರೆಗಿನ ರಾ.ಹೆ 66 ಉಡುಪಿ- ಮಂಗಳೂರು ರಸ್ತೆಯಾಗಿರುತ್ತದೆ. ವಿಡಿಯೋದಲ್ಲಿ ವಾಹನಗಳ ನಂಬ್ರಗಳನ್ನು ಪರಿಶೀಲಿಸಲಾಗಿ KA 20 MD 6767 ನೇ ನೀಲಿ ಬಣ್ಣದ ಮಹೀಂದ್ರಾ ಜೀಪು, KA 20 MA 9370 ನೇ ಕಪ್ಪು ಬಣ್ಣದ CRETA ಕಾರು, KA 20 ME 6996 ನೇ ಬಿಳಿ ಬಣ್ಣದ ಫಾರ್ಚುನರ್‌ ಕಾರು, KA 20 MD 8078 ನೇ ಬಿಳಿ ಬಣ್ಣದ ಸ್ವಿಫ್ಟ್ ಕಾರುಗಳು ಎಂದು ತಿಳಿದುಬಂದಿರುತ್ತದೆ.

ಠಾಣಾ ವ್ಯಾಪ್ತಿಯಲ್ಲಿ ಅತೀ ವೇಗ ಹಾಗೂ ತೀವ್ರ ಅಜಾಗರೂಕತೆಯಿಂದ ಸಾರ್ವಜನಿಕರ ಪ್ರಾಣಕ್ಕೆ ಅಪಾಯಕರವಾಗುವ ರೀತಿಯಲ್ಲಿ ರಸ್ತೆಯ ತುಂಬಾ ಅಡ್ಡದಿಡ್ಡಿಯಾಗಿ ವಾಹನಗಳನ್ನು ಚಲಾಯಿಸಿಕೊಂಡು ಹೋಗುತ್ತಿದ್ದ ಮೇಲ್ಕಂಡ ವಾಹನಗಳು ಹಾಗೂ ಅವುಗಳ ಚಾಲಕರುಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿ ವಿನಂತಿಸಿದರು.

ತಕ್ಷಣವೇ ಪೋಲಿಸರು ಉಡುಪಿ ಎಸ್ ಪಿ ಹಾಕೈ ಅಕ್ಷಯ್ ಮಚೀಂದ್ರ ಇವರ ಮಾರ್ಗದರ್ಶನದಲ್ಲಿ ಕಾರ್ಯಚರಣೆಗಿಳಿದು ನಾಲ್ಕು ಮಂದಿ ವಾಹನ ಚಾಲಕರು ಮತ್ತು ವಾಹನಗಳನ್ನು ವಶಪಡಿಸಿಕೊಂಡು ಕೇಸು ದಾಖಲಿಸಿದ್ದಾರೆ.

Leave a Reply

error: Content is protected !!