ಸಶಸ್ತ್ರ ಸೀಮಾ ಬಲ’ದಲ್ಲಿ SSLC ಪಾಸಾದವರಿಗೆ ಕಾನ್ಸ್‌ಟೇಬಲ್‌ ಹುದ್ದೆ

ಶೇರ್ ಮಾಡಿ

ಸಶಸ್ತ್ರ ಸೀಮಾ ಬಲವು ಇತ್ತೀಚೆಗೆ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ ಮಾಡಿತ್ತು. ಇದೀಗ ಆನ್‌ಲೈನ್‌ ಅರ್ಜಿಯ ಲಿಂಕ್ ಅನ್ನು ಎಸ್‌ಎಸ್‌ಬಿ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದೆ. ಈ ಹುದ್ದೆಗಳನ್ನು ಡ್ರೈವರ್, ಟೇಲರ್, ಗಾರ್ಡೆನರ್, ಕಾರ್ಪೆಂಟರ್, ಬ್ಲಾಕ್‌ಸ್ಮಿತ್, ಕಾಬ್ಲರ್, ವೆಟರಿನರಿ, ಬಾರ್ಬರ್, ಸಫಾಯಿವಾಲಾ ಟ್ರೇಡ್‌ಗಳಲ್ಲಿ ಭರ್ತಿ ಮಾಡಲಾಗುತ್ತದೆ. ಗ್ರೂಪ್‌ ಸಿ ನಾನ್‌-ಗೆಜೆಟೆಡ್ ಪೋಸ್ಟ್‌ಗಳು ಇವಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಿ.

ಆನ್‌ಲೈನ್‌ ಮೂಲಕ ಅರ್ಜಿ ಹಾಕಲು ಆರಂಭಿಕ ದಿನಾಂಕ : 22-05-2023
ಆನ್‌ಲೈನ್‌ ಮೂಲಕ ಅರ್ಜಿ ಹಾಕಲು ಕೊನೆ ದಿನಾಂಕ : 09-06-2023
ಹುದ್ದೆ ಹೆಸರು : ಕಾನ್ಸ್‌ಟೇಬಲ್
ಹುದ್ದೆಗಳ ಸಂಖ್ಯೆ : 543
ಕಾನ್ಸ್‌ಟೇಬಲ್ (ಸಫಾಯಿವಾಲಾ, ಟೇಲರ್, ವಾಶರ್‌ಮನ್, ಬಾರ್ಬರ್, ಗಾರ್ಡೆನರ್, ಕಾಬ್ಲರ್) ಪೋಸ್ಟ್‌ಗಳಿಗೆ ಭಾರತೀಯ ಪ್ರಜೆಗಳು ಮಾತ್ರ ಅಪ್ಲಿಕೇಶನ್‌ ಹಾಕಬೇಕು. ಕಾನ್ಸ್‌ಟೇಬಲ್‌ (ಬ್ಲಾಕ್‌ಸ್ಮಿತ್ ಮತ್ತು ಪೇಂಟರ್, ಡ್ರೈವರ್, ವೆಟರಿನರಿ, ಕಾರ್ಪೆಂಟರ್, ) ಪೋಸ್ಟ್‌ಗಳಿಗೆ ಭಾರತೀಯ / ನೇಪಾಳ / ಭೂತಾನ್ ಪ್ರಜೆಗಳು ಅಪ್ಲಿಕೇಶನ್‌ ಸಲ್ಲಿಸಬಹುದು.

ಶೈಕ್ಷಣಿಕ ಅರ್ಹತೆ : 10ನೇ ತರಗತಿ ಪಾಸ್ ಮಾಡಿರಬೇಕು.
ಸಶಸ್ತ್ರ ಸೀಮಾ ಬಲ ಕಾನ್ಸ್‌ಟೇಬಲ್‌ ವೇತನ ಶ್ರೇಣಿ ರೂ.21,700-69,100.
ವೇತನದ ಜತೆಗೆ ತುಟ್ಟಿ ಭತ್ಯೆ, ರೇಷನ್ ಭತ್ಯೆ, ಮನೆ ಬಾಡಿಗೆ ಭತ್ಯೆ, ಇತರೆ ಭತ್ಯೆಗಳನ್ನು ನೀಡಲಾಗುತ್ತದೆ.
ಅಪ್ಲಿಕೇಶನ್ ಸಲ್ಲಿಸುವುದು ಹೇಗೆ?

  • ವೆಬ್‌ಸೈಟ್ www.ssbrectt.gov.in ಗೆ ಭೇಟಿ ನೀಡಿ.
  • ಓಪನ್ ಆದ ಪೇಜ್‌ನಲ್ಲಿ ಕಾನ್ಸ್‌ಟೇಬಲ್‌ ಅರ್ಜಿಗೆ ನೀಡಲಾದ ಲಿಂಕ್ ಕ್ಲಿಕ್ ಮಾಡಿ.
  • ನಂತರ ಅಗತ್ಯ ಮಾಹಿತಿಗಳನ್ನು ನೀಡಿ ಅರ್ಜಿ ಪೂರ್ಣಗೊಳಿಸಿ.
    ಸಾಮಾನ್ಯ / ಒಬಿಸಿ / ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ ಶುಲ್ಕ ರೂ.100 ನೀಡಲಾಗುತ್ತದೆ. ಇತರೆ ಕೆಟಗರಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇರುತ್ತದೆ.
    ಅಪ್ಲಿಕೇಶನ್‌ ಹಾಕಿದವರಿಗೆ ಲಿಖಿತ ಪರೀಕ್ಷೆ / ಸಹಿಷ್ಣುತಾ ಪರೀಕ್ಷೆ / ದೈಹಿಕ ಸಾಮರ್ಥ್ಯ ಪರೀಕ್ಷೆ / ವೈದ್ಯಕೀಯ ಪರೀಕ್ಷೆ ನಡೆಸಿ ಶಾರ್ಟ್‌ ಲಿಸ್ಟ್‌ ಆದವರನ್ನು, ನಂತರ ಮೂಲ ದಾಖಲೆಗಳ ಪರಿಶೀಲನೆ ನಡೆಸಿ ಅಂತಿಮವಾಗಿ ಆಯ್ಕೆ ಮಾಡಲಾಗುತ್ತದೆ.

Leave a Reply

error: Content is protected !!