ನೆಲ್ಯಾಡಿ ಅಶ್ವಿನಿ ಹಾಸ್ಪಿಟಲ್ ನಲ್ಲಿ ಉಚಿತ ಸಂಧಿವಾತ, ಕೀಲು ಮರುಜೋಡನೆ, ಲಿಗಾಮೆಂಟ್, ಮೆನಿಸ್ಕಿಯಲ್ ಇಂಜುರೀಸ್ ಪರಿಶೀಲನಾ ಶಿಬಿರ

ಶೇರ್ ಮಾಡಿ

ನೆಲ್ಯಾಡಿ: ಇಲ್ಲಿನ ಅಶ್ವಿನಿ ಹಾಸ್ಪಿಟಲ್ ನಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಉಚಿತವಾಗಿ ಸಂದಿವಾತ, ಕೀಲು ಮರುಜೋಡನೆ, ಲಿಗಾಮೆಂಟ್, ಮೆನಿಸ್ಕಿಯಲ್ ಇಂಜುರೀಸ್ ಪರಿಶೀಲನಾ ಶಿಬಿರ ಮೇ.28ರಂದು ಹಮ್ಮಿಕೊಳ್ಳಲಾಯಿತು.

ಅಶ್ವಿನಿ ಆಸ್ಪತ್ರೆಯ ನಿರ್ದೇಶಕರಾದ ಡಾ.ಮುರಳಿಧರ, ಡಾ.ಸುಧಾ ರವರ ಮಾರ್ಗದರ್ಶನದಲ್ಲಿ ಪ್ರಖ್ಯಾತ ಜಾಯಿಂಟ್ ರಿಪ್ಲೇಸ್ಮೆಂಟ್ ಹಾಗೂ ಆರ್ಥೋಸ್ಕೋಪಿಕ್ ಸರ್ಜನ್ ಡಾ.ಶರತ್ ಬಾಳೆಮನೆ ಮತ್ತು ಡಾ. ಶಮಂತ್ ವೈ ಕೆ ರವರು ಭಾಗವಹಿಸಿ ರೋಗಿಗಳನ್ನು ಪರೀಕ್ಷಿಸಿ, ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡುವುದರೊಂದಿಗೆ, ಉಚಿತ ಔಷಧಿ ಹಾಗೂ ಉಚಿತ ಮೂಳೆ ಸಾಂದ್ರತೆ ಪರೀಕ್ಷೆಯನ್ನು ಮಾಡಿದರು.

ಸುಮಾರು 60ಕ್ಕಿಂತ ಹೆಚ್ಚಿನ ಜನ ಇದರ ಸದುಪಯೋಗವನ್ನು ಪಡೆದುಕೊಂಡರು.
ಆಸ್ಪತ್ರೆಯ ಮ್ಯಾನೇಜರ್ ಸುಮಂತ್ ಹಾಗೂ ಸಿಬ್ಬಂದಿಗಳು ಸಹಕರಿಸಿದರು.

Leave a Reply

error: Content is protected !!