ಕಡಬ: ಉಪನ್ಯಾಸಕ ಟಿ.ಆರ್.ಮಂಜುನಾಥ ಪ್ರಾಂಶುಪಾಲರಾಗಿ ಪದೋನ್ನತಿ

ಶೇರ್ ಮಾಡಿ

ನೇಸರ ಜ.07 ಕಡಬ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಳೆದ ಎರಡು ವರ್ಷಗಳಿಂದ ರಸಾಯನಶಾಸ್ತ್ರ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿದ ಹಾಗೂ ಉಪನ್ಯಾಸಕ ವೃತ್ತಿಯಲ್ಲಿ 27 ವರ್ಷಗಳ ಅಭೂತಪೂರ್ವ ಅನುಭವ ಹೊಂದಿರುವ ಹಿರಿಯ ಉಪನ್ಯಾಸಕ ಟಿ.ಆರ್.ಮಂಜುನಾಥ ಇವರನ್ನು ಇಲಾಖೆಯು ಪ್ರಾಂಶುಪಾಲರಾಗಿ ಪದೋನ್ನತಿ ನೀಡಿ ಸರಕಾರಿ ಪದವಿಪೂರ್ವ ಕಾಲೇಜು ಕನ್ಯಾನ ಇಲ್ಲಿಗೆ ವರ್ಗಾಯಿಸಿದ ಪ್ರಯುಕ್ತ ಕಾಲೇಜಿನಲ್ಲಿ ಪ್ರಾಂಶುಪಾಲರ ನೇತೃತ್ವದಲ್ಲಿ ಉಪನ್ಯಾಸಕರು,ವಿದ್ಯಾರ್ಥಿಗಳು ಮತ್ತು ಪೂರ್ವ ವಿದ್ಯಾರ್ಥಿಗಳು ಸೇರಿ ಸ್ಥಳೀಯ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಅಭೂತಪೂರ್ವ ಬೀಳ್ಕೋಡುಗೆ ಸಮಾರಂಭವನ್ನು ದಿನಾಂಕ 6/1/2022 ರಂದು ಆಯೋಜಿಸಲಾಗಿತ್ತು.ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಜನಾರ್ದನ ಕೆ.ಎನ್.ರವರು ತಮ್ಮ ಮತ್ತು ಉಪನ್ಯಾಸಕ ಮಂಜುನಾಥ ರವರ ನಡುವಿನ ಇಪ್ಪತೈದು ವರ್ಷಗಳಿಂದ ಇರುವ ಸಂಬಂಧ,ಒಡನಾಟಗಳ ಸವಿನೆನಪುಗಳನ್ನು ಮೆಲುಕು ಹಾಕಿದರು,ಇಬ್ಬರೂ ರಸಾಯನಶಾಸ್ತ್ರ ಉಪನ್ಯಾಸಕರಾಗಿದ್ದ ಕಾರಣ ಹೆಚ್ಚಿನ ಭಾಂದವ್ಯ ಬೆಳೆಯಲು ಕಾರಣವಾಗಿದೆ ಎಂದರು.ತಮ್ಮ ಕರ್ತವ್ಯ ನಿರ್ವಹಣೆಗೆ ಮಂಜುನಾಥರು ನೀಡಿದ ಎಲ್ಲಾ ಸಹಾಯ ಸಹಕಾರಗಳನ್ನು ಸ್ಮರಿಸಿದರು.
ಉಪನ್ಯಾಸಕರಾದ ವಾಸುದೇವ ಗೌಡ,ಭಾರತಿ,ಸಲೀನ್ ಕೆ.ಪಿ.ಮಹದೇವ ಶೆಟ್ಟಿ,ಸುಕೇಶ ಚಂದ್ರಶೇಖರ,ಸೀಮಾ,ಚೇತನಿ ಮತ್ತು ವಿದ್ಯಾರ್ಥಿಗಳು ಮಂಜುನಾಥರ ಕುರಿತು ಮಾತನಾಡಿದರು ಹಾಗೂ ಅವರ ಮುಂದಿನ ವ್ರತ್ತಿ ಜೀವನಕ್ಕೆ ಶುಭ ಕೋರಿದರು. ಅತಿಥಿಗಳಾಗಿ ಆಗಮಿಸಿದ ಇ.ಸಿ.ಚೆರಿಯನ್ ಬೇಬಿ,ಶ್ರೀ ಹರಿಶಂಕರ ಕೆ.ಎನ್,ಶಿವಪ್ರಸಾದ ಮೈಲೇರಿ ಯವರುಗಳು ಮಂಜುನಾಥರಿಗೆ ಶುಭಾಶಯಗಳನ್ನು ಕೋರಿದರು.ಸಂಸ್ಥೆಯ ವತಿಯಿಂದ ಮಂಜುನಾಥರನ್ನು ಪ್ರಾಂಶುಪಾಲರ ನೇತೃತ್ವದಲ್ಲಿ ಅತಿಥಿಗಳು,ಉಪನ್ಯಾಸಕರು,ವಿದ್ಯಾರ್ಥಿಗಳು,ಪೂರ್ವ ವಿದ್ಯಾರ್ಥಿಗಳು ಸೇರಿ ಸನ್ಮಾನಿಸಿ ಫಲಪುಷ್ಪಗಳನ್ನು ಮತ್ತು ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.
ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಾಧಿಕಾರಿ ಸಲೀನ್
ಕೆ.ಪಿ.ಸನ್ಮಾನಿತರ ಕಿರು ಪರಿಚಯ ನೀಡಿದರು,ಸುಕೇಶ ಚಂದ್ರಶೇಖರ ಸನ್ಮಾನ ಪತ್ರ ವಾಚಿಸಿದರು.ವಾಸುದೇವ ಗೌಡ ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು,ಮಹದೇವ ಶೆಟ್ಟಿ ವಂದಿಸಿದರು,ಶ್ರೀಮತಿ ಭಾರತಿ.ಜಿ ಕಾರ್ಯಕ್ರಮ ನಿರೂಪಿಸಿದರು.ಕಾಲೇಜು ವಿದ್ಯಾರ್ಥಿ ನಾಯಕ ಅಬ್ದುಲ್ ಅಝೀಝ್ ಮತ್ತು ಕಾರ್ಯದರ್ಶಿ ಮನ್ವಿತ್ ವೇದಿಕೆಯಲ್ಲಿದ್ದು ವಿದ್ಯಾರ್ಥಿ ಸಂಘದ ವತಿಯಿಂದ ಮಾವಿನ ಸಸಿಯನ್ನು ತಮ್ಮ ನೆಚ್ಚಿನ ಉಪನ್ಯಾಸಕರಿಗೆ ನೀಡಿ ಗೌರವಿಸಿದರು. ಸನ್ಮಾನ ಸ್ವೀಕರಿಸಿದ ಮಂಜುನಾಥರು ಈ ಸಂಸ್ಥೆಯ ಪ್ರಾಚಾರ್ಯರ,ಪ್ರತಿಯೊಬ್ಬ ಉಪನ್ಯಾಸಕರ,ವಿದ್ಯಾರ್ಥಿಗಳ,ಪೂರ್ವ ವಿದ್ಯಾರ್ಥಿಗಳ ಜೊತೆಗಿನ ಸಂಬಂಧಗಳನ್ನು ಸ್ಮರಿಸಿ ಭಾವುಕರಾದರು.ತಮ್ಮ 27ವರ್ಷಗಳ ವ್ರತ್ತಿ ಜೀವನದಲ್ಲಿ ಎಲ್ಲಿಯೂ,ಎಂದಿಗೂ ಪಡೆಯದ ಅಭೂತಪೂರ್ವ ಬೀಳ್ಕೋಡುಗೆ ಸಮಾರಂಭದ ಆಯೋಜಕರಿಗೆ ತಮ್ಮ ಮನದಾಳದ ಧನ್ಯವಾದಗಳನ್ನು ಅರ್ಪಿಸುವ ಜೊತೆಗೆ ತಮ್ಮ ವತಿಯಿಂದ ಎಲ್ಲರಿಗೂ ಭೋಜನ ವ್ಯವಸ್ಥೆ ಮಾಡಿಸಿದರು.

ಕಾಲೇಜಿಗೆ ರೂಪಾಯಿ ಹತ್ತು ಸಾವಿರವನ್ನು ದತ್ತಿ ನಿಧಿಯಾಗಿ ಇಡಲು ಪ್ರಾಂಶುಪಾಲರಿಗೆ ಮೊತ್ತವನ್ನೂ ಹಸ್ತಾಂತರಿಸಿದರು ಮತ್ತು ತಮ್ಮ ಸವಿನೆನಪಿಗಾಗಿ ಕಾಲೇಜಿನ ಆವರಣದಲ್ಲಿ ತೆಂಗಿನ ಗಿಡವನ್ನೂ ನೆಟ್ಟು ಸಂಸ್ಥೆಗೆ ವಿಧಾಯ ಹೇಳಿದರು.

Leave a Reply

error: Content is protected !!