ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ಪದವಿ ನಂತರದ ಶಿಕ್ಷಣದ ಅವಕಾಶಗಳ ಕುರಿತು ಕಾರ್ಯಾಗಾರ

ಶೇರ್ ಮಾಡಿ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಎಚ್ ಆರ್ ಮತ್ತು ಪ್ಲೇಸ್ ಮೆಂಟ್ ಘಟಕ ಮತ್ತು ಆಂತರಿಕ ಗುಣಮಟ್ಟ ಭರವಸಾ ಕೋಶದ ಸಹಯೋಗದಲ್ಲಿ ಪದವಿ ನಂತರದ ಶಿಕ್ಷಣದ ಅವಕಾಶಗಳು ಎಂಬ ವಿಷಯದ ಕುರಿತು ಕಾರ್ಯಾಗಾರವನ್ನು ನಡೆಸಲಾಯಿತು.

ಮಂಗಳೂರಿನ ಕೆರಿಯರ್ ಡೆಸ್ಟಿನಿ ಸಂಸ್ಥೆಯ ತರಬೇತುದಾರರಾದ ಸುನಿಲ್ ಜಾನ್ ಜಾರ್ಜ್, ಜಯಶ್ರೀ ಮತ್ತು ಅನಿತಾ ಕೆ ಸಂಪನ್ಮೂಲಗಳ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
ಪದವಿ ಶಿಕ್ಷಣದ ನಂತರ ವಿದ್ಯಾರ್ಥಿಗಳ ಪಡೆಯಬಹುದಾದ ಶಿಕ್ಷಣದ ಕುರಿತು ಕಾರ್ಯಾಗಾರದಲ್ಲಿ ಮಾಹಿತಿಯನ್ನುನೀಡಲಾಯಿತು.

ಕಾರ್ಯಾಗಾರದ ಸಂಯೋಜಕರಾದ ಡಾ.ಪ್ರಸಾದ ಎನ್, ರಾಜ್ಯಶಾಸ್ತ್ರ ಉಪನ್ಯಾಸಕ ಕುಮಾರ್ ಶೇಣಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 200 ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಪಾಲ್ಗೊಂಡರು.

Leave a Reply

error: Content is protected !!