ಉಜಿರೆ: ಪರಿಸರ ಸಮತೋಲನ ಕಾಪಾಡುವಲ್ಲಿ ಎಲ್ಲರ ಪಾತ್ರ ಬಹಳ ಮುಖ್ಯ. ಪ್ಲಾಸ್ಟಿಕ್ ಇತ್ಯಾದಿಗಳ ಬಳಕೆ ಹಾಗೂ ವಿಲೇವಾರಿ ಕೂಡ ಸರಿಯಾದ ದಿಶೆಯಲ್ಲಿ ಆಗಬೇಕು. ಪರಿಸರ ಸಂರಕ್ಷಣೆಯಲ್ಲಿ ಮರಗಿಡಗಳ ಕೊಡುಗೆ ಅಪಾರ. ಗಿಡಗಳನ್ನು ನೆಡುವುದರೊಂದಿಗೆ ಅವುಗಳ ಪೋಷಣೆ ಅತಿ ಮುಖ್ಯ. ಈ ಮೂಲಕ ಪ್ರತಿದಿನ ಪರಿಸರ ಕಾಳಜಿ ಅಗತ್ಯ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರಮೋದ್ ಕುಮಾರ್ ಹೇಳಿದರು.
ಇವರು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ಮಾತನಾಡಿದರು.
ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ ಸ್ವಾಗತಿಸಿದರು. ಸಹ ಯೋಜನಾಧಿಕಾರಿ ಪದ್ಮಶ್ರೀ ರಕ್ಷಿತ್ ನಿರೂಪಿಸಿ ವಂದಿಸಿದರು. ಇದೇ ಸಂದರ್ಭದಲ್ಲಿ ಸ್ವಯಂ ಸೇವಕರಿಂದ ಸಸಿಗಳನ್ನು ನೆಡುವ ಕಾರ್ಯ ಜರುಗಿತು.