ಹಾಲು ಸಾಗಾಟ ಮಾಡುತ್ತಿದ್ದ ರಿಕ್ಷಾ ಪಲ್ಟಿ

ಶೇರ್ ಮಾಡಿ

ವಿಟ್ಲ: ಸಾರಡ್ಕ – ಪುಣಚ ರಸ್ತೆಯ ತೋರಣಕಟ್ಟೆಯ ಸೊಸೈಟಿಯ ಸಮೀಪ ಮಂಗಳವಾರ ದನ ರಸ್ತೆಯಲ್ಲಿ ಅಡ್ಡ ಬಂದ ಹಿನ್ನಲೆಯಲ್ಲಿ ರಿಕ್ಷಾವೊಂದು ಮಗುಚಿ ಬಿದ್ದ ಘಟನೆ ನಡೆದಿದೆ.

ಆಜೇರು ನಿವಾಸಿ ಶಾಂತಾರಾಮ ರಾವ್ ಅವರು ರಿಕ್ಷಾದಲ್ಲಿ ಮಂಗಳವಾರ ಬೆಳಗ್ಗೆ ತೋರಣಕಟ್ಟೆಯಿಂದ ಪರಿಯಲ್ತಡ್ಕಕ್ಕೆ ಹಾಲು ಸಾಗಾಟ ಮಾಡುತ್ತಿದ್ದ ಸಂದರ್ಭ ಘಟನೆ ನಡೆದಿದೆ. ಘಟನೆಯಿಂದ ರಿಕ್ಷಾದಲ್ಲಿ ಇದ್ದ ಸುಮಾರು 50ಲೀಟರ್ ಹಾಲು ರಸ್ತೆಗೆ ಚೆಲ್ಲಲ್ಪಟ್ಟಿದೆ. ರಿಕ್ಷಾ ಚಾಲನೆ ಮಾಡುತ್ತಿದ್ದ ಶಾಂತಾರಾಮ ಅವರು ಸಣ್ಣಪುಟ್ಟ ಗಾಯದೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಇಳಿಜಾರು ಪ್ರದೇಶದಲ್ಲಿ ರಸ್ತೆಗೆ ಏಕಾಏಕಿ ದನ ಅಡ್ಡ ಬಂದಿದ್ದು, ತಪ್ಪಿಸಲು ಹೋಗುವ ಸಂದರ್ಭ ರಿಕ್ಷಾ ರಸ್ತೆಯ ಪಕ್ಕಕ್ಕೆ ಮಗುಚಿದೆ ಎಂದು ದೂರಲಾಗಿದೆ.

Leave a Reply

error: Content is protected !!