ಸಿಇಟಿ ಅಭ್ಯರ್ಥಿಗಳಿಗೆ ಕೆಇಎ’ಯಿಂದ ಮುಖ್ಯ ಮಾಹಿತಿ.. RD ಸಂಖ್ಯೆ ತಿದ್ದುಪಡಿ ಮಾಡಲು ಪಟ್ಟಿ ಬಿಡುಗಡೆ

ಶೇರ್ ಮಾಡಿ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಯುಜಿಸಿಇಟಿ 2023ರ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸುವಾಗ ನಮೂದಿಸಿದ್ದ ಆರ್.ಡಿ ಸಂಖ್ಯೆಯನ್ನು ತಿದ್ದುಪಡಿ ಮಾಡಿಕೊಳ್ಳಲು ಅಭ್ಯರ್ಥಿಗಳಿಗೆ ಸೂಚನೆ ನೀಡಿದೆ.

ಅಭ್ಯರ್ಥಿಗಳು ಸಿಇಟಿ-2023ಕ್ಕೆ ಆನ್‌ಲೈನ್ ಅರ್ಜಿಯಲ್ಲಿ ನಮೂದಿಸಿರುವ ಜಾತಿ ಪ್ರಮಾಣ ಪತ್ರದ / ಆದಾಯ ಪ್ರಮಾಣ ಪತ್ರದ / ಕಲ್ಯಾಣ ಕರ್ನಾಟಕ ಪ್ರಮಾಣ ಪತ್ರದ ಆರ್.ಡಿ ಸಂಖ್ಯೆಯನ್ನು ಇಲಾಖೆಯಲ್ಲಿರುವ ಆರ್‌ಡಿ ಸಂಖ್ಯೆಗೆ ಆನ್‌ಲೈನ್ ಮೂಲಕ ಪರಿಶೀಲನೆ ಮಾಡುವ ಕಾರ್ಯ ಪ್ರಗತಿಯಲ್ಲಿದೆ.
ಪರಿಶೀಲನೆಯ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳ ಹೆಸರು ಅಥವಾ ನಮೂದಿಸಿರುವ ಜಾತಿ ತಾಳೆಯಾಗದಿರುವುದು, ಪ್ರಮಾಣ ಪತ್ರವು ಚಾಲ್ತಿಯಲ್ಲಿ ಇಲ್ಲದೇ ಇರುವುದು, ಅಭ್ಯರ್ಥಿಗಳ ಹೆಸರಿನಲ್ಲಿ ಪ್ರಮಾಣ ಪತ್ರಗಳು ಇಲ್ಲದೇ ಇರುವುದು ಅಥವಾ ನಿಗದಿತ ನಮೂನೆಗಳಲ್ಲಿ ಪಡೆಯದೇ ಇರುವುದು, ಇನ್ನಿತರ ವಿವಿಧ ಕಾರಣಗಳಿಂದ ಆರ್‌ಡಿ ಸಂಖ್ಯೆಗಳು ತಾಳೆ ಹೊಂದದೇ ತಿರಸ್ಕೃತಗೊಂಡಿರುವ ಅಭ್ಯರ್ಥಿಗಳ ಪಟ್ಟಿ ಮಾಡಿ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.
ತಾಳೆ ಹೊಂದದೇ ಇರುವ ಪಟ್ಟಿಯಲ್ಲಿ ಹೆಸರು ಇರುವಂತಹ ಅಭ್ಯರ್ಥಿಗಳು ಮಾತ್ರ ದಿನಾಂಕ 07-06-2023 ರಿಂದ 12-06-2023ರವರೆಗೆ ಪ್ರಾಧಿಕಾರದ ಪೋರ್ಟಲ್‌ನಲ್ಲಿ ಅಭ್ಯರ್ಥಿಗಳ ಲಾಗಿನ್ ಮತ್ತು ಪಾಸ್‌ವರ್ಡ್ ನಮೂದಿಸಿ ಸರಿಯಾದ ಆರ್‌ಡಿ ಸಂಖ್ಯೆಯನ್ನು ದಾಖಲಿಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ತಾಳೆ ಹೊಂದದೇ ತಿರಸ್ಕೃತಗೊಂಡಿರುವ ಅಭ್ಯರ್ಥಿಗಳ ಪಟ್ಟಿ ಮತ್ತು ಇತರೆ ಮಾಹಿತಿಗಳಿಗಾಗಿ ಅಭ್ಯರ್ಥಿಗಳು ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ https://cetonline.karnataka.gov.in/kea/ ಗೆ ಭೇಟಿ ನೀಡಿ.

Leave a Reply

error: Content is protected !!