ಅಡಿಕೆ ಕೊಯ್ಯುವಾಗ ದೋಟಿ ವಿದ್ಯುತ್ ತಂತಿ ತಗುಲಿ ಯುವಕ ಮೃತ್ಯು

ಶೇರ್ ಮಾಡಿ

ಬಂಟ್ವಾಳ:ಅಡಿಕೆ ಮರದಿಂದ ಅಡಿಕೆ ತೆಗೆಯುತ್ತಿದ್ದ ವೇಳೆ ವಿದ್ಯುತ್ ಶಾಕ್ ಹೊಡೆದು ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಮಲಾಯಿಬೆಟ್ಟು ಎಂಬಲ್ಲಿ ಇಂದು ಮಧ್ಯಾಹ್ನದ ವೇಳೆ ನಡೆದಿದೆ.
ಬೋಳಿಯಾರು ಗ್ರಾಮದ ನಿವಾಸಿ ಇಬ್ರಾಹಿಂ ಎಂಬವರ ಪುತ್ರ ಶಾಫಿ(28) ಮೃತಪಟ್ಟ ದುರ್ದೈವಿ.
ಸಜೀಪ ಮುನ್ನೂರು ಗ್ರಾಮದ ಮೂಸಬ್ಬ ಎಂಬವರ ತೋಟದಲ್ಲಿ ಅಡಿಕೆ ಕೀಳುವ ವೇಳೆ ಸುಮಾರು‌ 11.15ರ ಆಸುಪಾಸಿನಲ್ಲಿ ಈ ದುರ್ಘಟನೆ ನಡೆದಿದೆ.

ಶಾಫಿ ಅವರು ಕಳೆದ ಅನೇಕ ವರ್ಷಗಳಿಂದ ಅಡಿಕೆ ವ್ಯವಹಾರ ನಡೆಸುತ್ತಿದ್ದರು ಎನ್ನಲಾಗಿದೆ. ವರ್ಷಂಪ್ರತಿ ಅಡಿಕೆಯನ್ನು ಗಿಡದಿಂದಲೇ ಕ್ರಯಕ್ಕೆ ಪಡೆದು ಅ ಬಳಿಕ ಅಡಿಕೆ ಕೀಳುವುದನ್ನು ಇವರು ಮಾಡುತ್ತಾ ಬಂದಿದ್ದರು. ಈ ವರ್ಷ ಅಡಿಕೆ ಕೀಳಲು ಸಾವಿರಾರು ರೂ ನೀಡಿ ಹೊಸ ಪೈಬರ್ ಸಲಕೆಯನ್ನು ಖರೀದಿ ಮಾಡಿದ್ದರು. ಇಂದು ಅದೇ ಹೊಸ ಸಲಕೆಯಲ್ಲಿ ಮಲಾಯಿಬೆಟ್ಟುವಿನ ತೋಟದಲ್ಲಿ ಅಡಿಕೆ ಕೀಳುವ ವೇಳೆ ಶಾಫಿ ಅವರ ಕೈಯಿಂದ ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಹಾದು ಹೋಗಿರುವ ಎಲ್.ಟಿ.ವಯರ್ ಗೆ ತಾಗಿದೆ. ಪೈಬಲ್ ಸಲಕೆಯಲ್ಲಿ ಅಡಿಕೆ ಕೀಳಲು ಅಳವಡಿಸಿದ ಕಬ್ಬಿಣದ ಕತ್ತಿಯ ಮೂಲಕ ವಿದ್ಯುತ್ ಹರಿದು ಶಾಫಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಸಜೀಪಮುನ್ನೂರು ಗ್ರಾಮಕರಣಿಕೆ ಸ್ವಾತಿ, ಮೆಸ್ಕಾಂನ ಅಧಿಕಾರಿಗಳು ಹಾಗೂ ಗ್ರಾಮಾಂತರ ಪೋಲಿಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ಧಾರೆ.

Leave a Reply

error: Content is protected !!