ಶಕ್ತಿ ಯೋಜನೆಗೆ ನಾಳೆ ಸಿಎಂ ಚಾಲನೆ – ಮಹಿಳೆಯರಿಗೆ ರಾಜ್ಯವ್ಯಾಪಿ ಉಚಿತ ಸಂಚಾರ

ಶೇರ್ ಮಾಡಿ

ಬೆಂಗಳೂರು: ಜೂ.11ರ ಮಧ್ಯಾಹ್ನ ಭಾನುವಾರ ಶಕ್ತಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಅವರು, ನಾಳೆ ಸಿಎಂ ‘ಶಕ್ತಿ ಯೋಜನೆ ಉದ್ಘಾಟನೆ ಮಾಡುತ್ತಾರೆ. ಬಳಿಕ ಒಂದು ರೌಂಡ್ ಬಸ್ ನಲ್ಲಿ ಹೋಗುತ್ತೇವೆ. ಬೇರೆ ಪ್ರದೇಶಗಳಿಗೆ ಹೋಗುವ ಮಹಿಳೆಯರು ಬಸ್​ನಲ್ಲಿ ಕುಳಿತಿರುತ್ತಾರೆ. ಆ ಬಸ್​ಗೆ ಸಿಎಂ ಹಸಿರು ನಿಶಾನೆ ತೋರಿಸಿ ಚಾಲನೆ ಕೊಡುತ್ತಾರೆ. ನಂತರ ಸ್ಮಾರ್ಟ್ ಕಾರ್ಡ್ ಸಾಂಕೇತಿಕವಾಗಿ ಕೆಲವರಿಗೆ ಕೊಡುತ್ತೇವೆ ಎಂದರು.
ಇನ್ನು ಎಲ್ಲರೂ ಸ್ಮಾರ್ಟ್ ಕಾರ್ಡ್ ಮಾಡಿಸಿಕೊಳ್ಳಲು ಮೂರು ತಿಂಗಳು ಅವಧಿ ನೀಡಲಾಗಿದ್ದು, ಅಲ್ಲಿಯವರೆಗೆ ತಮ್ಮಲ್ಲಿರುವ ಗುರುತಿನ ಚೀಟಿ ತೋರಿಸಿ ಪ್ರಯಾಣ ಮಾಡಬಹುದು.

Leave a Reply

error: Content is protected !!