ಪ್ರಿಯಕರನಿಗಾಗಿ ಮಗುವನ್ನೇ ಬಿಟ್ಟು ಪುತ್ತೂರಿಗೆ ಬಂದ ಹುಬ್ಬಳ್ಳಿ ಮಹಿಳೆ.!!

ಶೇರ್ ಮಾಡಿ

ಪುತ್ತೂರು: ಹುಬ್ಬಳ್ಳಿಯಲ್ಲಿ ವಾಸವಾಗಿರುವ ಮಹಿಳೆಯೊಬ್ಬಳು ತನ್ನ 11 ತಿಂಗಳ ಮಗುವನ್ನು ತವರು ಮನೆಯಲ್ಲಿ ಬಿಟ್ಟು ಪುತ್ತೂರಿನಲ್ಲಿರುವ ಪ್ರಿಯಕರನನ್ನು ತಡರಾತ್ರಿ ಸೇರಿಕೊಂಡ ಘಟನೆ ನಡೆದಿದ್ದು, ಬಳಿಕ ಮಹಿಳೆಯ ಮನೆಯವರು ಮಹಿಳೆಗಾಗಿ ಪುತ್ತೂರಿನಲ್ಲಿ ಹುಡುಕಾಟ ನಡೆಸಿರುವುದಾಗಿ ತಿಳಿದು ಬಂದಿದೆ.

ಹುಬ್ಬಳ್ಳಿಯ ಮಹಿಳೆಯೊಬ್ಬಳು ಅದೇ ಊರಿನ ಯುವಕನನ್ನು ಪ್ರೀತಿಸುತ್ತಿದ್ದು, ಆತ ಪುತ್ತೂರಿನ ಕೋಡಿಂಬಾಡಿಯಲ್ಲಿ ತೋಟವೊಂದರಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಮಾಹಿತಿ ತಿಳಿದ ಮಹಿಳೆ ತನ್ನ ಮಗುವನ್ನು ತವರು ಮನೆಯಲ್ಲಿ ಬಿಟ್ಟು ಫೋನ್ ಕರೆಯನ್ನು ಸ್ವೀಕರಿಸದೆ ನಾಪತ್ತೆಯಾಗಿದ್ದಳು. ಪುತ್ತೂರಿನಲ್ಲಿ ತನ್ನ ಪ್ರಿಯಕರನ ಬಳಿ ಬಂದಿರಬಹುದು ಎಂಬ ಮಾಹಿತಿ ತಿಳಿದ ಆಕೆಯ ಮನೆಯವರು ಪುತ್ತೂರಿನ ಕೋಡಿಂಬಾಡಿಗೆ ರಾತ್ರಿ ಸುಮಾರು 11 ವೇಳೆಗೆ ಬಂದಿಳಿದಿದ್ದಾರೆ.
ಈ ವೇಳೆ ಕೋಡಿಂಬಾಡಿ ಗ್ರಾಪಂ ಸದಸ್ಯ ಜಯಪ್ರಕಾಶ್ ಬದಿನಾರು ಅವರಿಂದ ಮಾಹಿತಿ ಪಡೆದುಕೊಂಡು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಪೊಲೀಸರು ಬಂದು ಅವರ ಜತೆ ಹುಡುಕಾಟ ಆರಂಭಿಸಿದರು. ಈ ವೇಳೆ ಕೋಡಿಂಬಾಡಿಯಲ್ಲಿ ಕೆಲಸ ಮಾಡುತ್ತಿದ್ದವ ಅಲ್ಲಿಂದ ಪರಾರಿಯಾಗಿದ್ದಾನೆ. ಬಳಿಕ ಅವರಿಬ್ಬರೂ ಸಿದ್ಧಕಟ್ಟೆಯಲ್ಲಿರುವುದನ್ನು ಟವರ್ ಲೊಕೇಶನ್ ಮೂಲಕ ಪತ್ತೆಹಚ್ಚಿ ಅಲ್ಲಿಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈಕೆ ಅಷ್ಟು ಬೇಗ ನಮ್ಮ ಕಣ್ಣುತಪ್ಪಿಸಿ ಪುತ್ತೂರಿಗೆ ಬರುತ್ತಾಳೆ ಎಂದು ತಿಳಿದಿರಲಿಲ್ಲ ಮಹಿಳೆಯ ತಾಯಿ ನೋವು ತೋಡಿಕೊಂಡಿದ್ದಾರೆ.

Leave a Reply

error: Content is protected !!