ನೇತ್ರಾವತಿ ನದಿ ಪಕ್ಕ ಮುರಿದು ಬಿದ್ದ ಪಾದಚಾರಿ ಸೇತುವೆ

ಶೇರ್ ಮಾಡಿ

ರಾಷ್ಟ್ರೀಯ ಹೆದ್ದಾರಿ 66ರ ಜಪ್ಪಿನಮೊಗರು ನೇತ್ರಾವತಿ ಸೇತುವೆ ಸಮೀಪದಿಂದ ಉಳ್ಳಾಲ ಜಪ್ಪಿನಮೊಗರುವಿನ ಹೊಗೆ ಪ್ರದೇಶಕ್ಕೆ ಸುಲಭ ಸಂಪರ್ಕದ ನದಿ ಬದಿಯ ಪಾದಚಾರಿ ಸೇತುವೆ ತುಂಡಾಗಿ ಬಿದ್ದು ಜನರು ಸುತ್ತಿ ಬಳಸಿ ಸಂಚರಿಸಬೇಕಾದ ಸಂಕಷ್ಟ ಎದುರಾಗಿದೆ.

ತೊಕ್ಕೊಟ್ಟು ಭಾಗದಿಂದ ಮಂಗಳೂರು ಕಡೆಗೆ ಬರುವಾಗ ನೇತ್ರಾವತಿ ಸೇತುವೆ ಆರಂಭವಾಗುವಾಗ ಎಡಭಾಗದಲ್ಲಿರುವ ಹಾದಿಯಲ್ಲಿ(ನೇತ್ರಾವತಿ ನದಿಯ ಬದಿಯಲ್ಲಿ) ಸುಮಾರು 700 ಮೀ.ನಷ್ಟು ಸಾಗಿದರೆ ಹೊಗೆ ಪ್ರದೇಶಕ್ಕೆ ತೆರಳಲು ಸಾಧ್ಯವಿದೆ. ನಿತ್ಯ ನೂರಾರು ಮಂದಿ ಇದೇ ದಾರಿಯಲ್ಲಿ ನಡೆದುಕೊಂಡು ಹೋಗುತ್ತಾರೆ. ಇಲ್ಲಿನ ಜನರು ವಾಹನದಲ್ಲಿ ಹೋಗಬೇಕಾದರೆ ಹೊಗೆ ಪ್ರದೇಶದಿಂದ ತೊಕ್ಕೊಟ್ಟು ಒಳಪೇಟೆಯಾಗಿ ಆಗಮಿಸಿ ಬರಬೇಕಾಗುತ್ತದೆ; ಸುಮಾರು 6 ಕಿ.ಮೀ. ಸಂಚರಿಸಬೇಕು. ಪಾಲಿಕೆ ವ್ಯಾಪ್ತಿಗೆ ಬರುವ ಜಪ್ಪಿನಮೊಗರಿನ ಹೊಗೆ ಪ್ರದೇಶದಲ್ಲಿ ಸುಮಾರು 300ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಈ ಪ್ರದೇಶದ ಜನರು ಹೆದ್ದಾರಿಗೆ ಬಂದರೆ ಹಲವು ಬಸ್‌ಗಳು ಸಿಗುತ್ತವೆ. ಆದರೆ ಪಾದಚಾರಿ ಸೇತುವೆ ಮುರಿದು ಬಿದ್ದ ಪರಿಣಾಮ ಅವರು ತೊಕ್ಕೊಟ್ಟಿಗೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಸೇತುವೆ ಪಿಲ್ಲರ್‌ ಡ್ಯಾಮೇಜ್‌
ಹಲವು ವರ್ಷಗಳ ಹಿಂದೆ ನಿರ್ಮಿಸಿದ ಪಾದಚಾರಿ ಸೇತುವೆ ವಿವಿಧ ಕಾರಣದಿಂದ ಸಮಸ್ಯೆ ಆಗಿ ಹಲವು ಸಂದರ್ಭದಲ್ಲಿ ರಿಪೇರಿ ಕಂಡಿತ್ತು. ಆದರೆ ಇತ್ತೀಚೆಗೆ ಉಪ್ಪು ನೀರಿನ ಕಾರಣದಿಂದ ಪಾದಚಾರಿ ಸೇತುವೆಯ ಪಿಲ್ಲರ್‌ ಭಾಗವೇ ಕುಸಿದು ಬಿದ್ದಿದ್ದು ರಿಪೇರಿ ಮಾಡಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಇಲ್ಲಿ ನಡೆದುಕೊಂಡು ಹೋಗುತ್ತಿದ್ದವರು ಕೆಲವು ಸಮಯದಿಂದ ಸುತ್ತೂ ಬಳಸಿ ಹೋಗುತ್ತಿದ್ದಾರೆ.
ವೆಲ್ಡಿಂಗ್‌ ಕೆಲಸ ಮಾಡುವವರನ್ನು ಕರೆಸಿ ಸೇತುವೆ ಸರಿ ಮಾಡುವ ಪ್ರಯತ್ನ ಮಾಡಲಾಯಿತಾದರೂ ಫಲ ನೀಡಿಲ್ಲ. ಬೋಟ್‌ನಲ್ಲಿ ಸಾಮಗ್ರಿಗಳನ್ನು ಕೊಂಡೊಯ್ಯಲೂ ಆಗುತ್ತಿಲ್ಲ. ಹೀಗಾಗಿ ಪ್ರಮುಖ ಪಿಲ್ಲರ್‌ ಕೆಲಸ ನಿರ್ವಹಿಸಲು ಸಮಸ್ಯೆ ಆಗಿದೆ.

Leave a Reply

error: Content is protected !!