35 ಅಡಿ ಎತ್ತರದ ಹಲಸಿನ ಮರವೇರಿ ಹಣ್ಣು ಕೊಯ್ದ ಪೇಜಾವರ ಶ್ರೀ!

ಶೇರ್ ಮಾಡಿ

ನೀಲಾವರ ಗೋಶಾಲೆ ಆವರಣದಲ್ಲಿರುವ ಹಲಸಿನ ಹಣ್ಣಿನ ಮರದಲ್ಲಿ ಭಾರೀ ಸಂಖ್ಯೆಯಲ್ಲಿ ಹಲಸಿನ ಹಣ್ಣುಗಳು ಬಿಟ್ಟಿವೆ. ಆದರೆ, ಮರ ಭಾರೀ ಎತ್ತರ ಇರೋದ್ರಿಂದ ಯಾರೂ ಅದರತ್ರ ಗಮನಹರಿಸಿರಲಿಲ್ಲ.

ಇನ್ನೇನು ಮಳೆ ಜೋರಾದರೆ ಹಣ್ಣುಗಳು ಕೂಡಾ ಕೊಳೆಯುವ ಸಾಧ್ಯತೆ ಇರುತ್ತೆ. ಇದನ್ನ ಮನಗಂಡ ಪೇಜಾವರ ಶ್ರೀಗಳು ಏಕಾಏಕಿ ಗುರುವಾರ ಹೆಗಲಲ್ಲಿದ್ದ ಕೇಸರಿ ಶಲ್ಯವನ್ನ ತಲೆಗೆ ಸುತ್ತಿಕೊಂಡು, ಪಂಚೆಯನ್ನ ಕಚ್ಚೆಯಂತೆ ಬಿಗಿದು ಕಟ್ಟಿಕೊಂಡವರೇ ಕೈಯ್ಯಲ್ಲಿ ಕತ್ತಿ ಹಿಡಿದು ಸರಸರನೆ ಮರ ಏರಿದರು. ಹೀಗೆ ಮರ ಏರಬೇಕಾದರೆ ಹಗ್ಗವಾಗಲೀ, ಏಣಿಯಾಗಲೀ ಬಳಸದೇ ಮರ ಏರಿದ್ದು ಕಂಡು ಅವರ ಶಿಷ್ಯಂದಿರೇ ಆಶ್ಚರ್ಯಗೊಂಡಿದ್ದಾರೆ.

30 ರಿಂದ 35 ಅಡಿ ಎತ್ತರದ ಮರ ಏರಿದ ಶ್ರೀಗಳು ಪಕ್ವ ಭರಿತ ಎಂಟತ್ತು ಹಲಸಿನ ಹಣ್ಣುಗಳನ್ನು ಕಿತ್ತು ನೆಲಕ್ಕೆ ಹಾಕಿದ್ರು. ಬಳಿಕ ಶಿಷ್ಯಂದಿರಿಗೆ, ಗೋಶಾಲೆ ಸಿಬ್ಬಂದಿಗಳಿಗೆ ತಿನ್ನಲು ಕೊಟ್ಟರು. ಜೊತೆಗೆ ಗೋಶಾಲೆಯಲ್ಲಿರುವ ಗೋವುಗಳಿಗೂ ತಿನ್ನಲು ಕೊಟ್ಟು ಅವುಗಳ ಸಂತಸದಲ್ಲಿ ಪಾಲ್ಗೊಂಡರು.
ಶ್ರೀಗಳು ಮರವೇರಿದ ಪೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Reply

error: Content is protected !!
%d