ನಟ ಜಗ್ಗೇ​ಶ್​ ಅಚಾತುರ್ಯ ನಡಿಗೆಯಿಂದ ಪಾದದ ಮೂಳೆ ಮುರಿತ; 6 ವಾರ ದಿಗ್ಬಂಧನ!

ಶೇರ್ ಮಾಡಿ

ನವರಸ ನಾಯಕ ಜಗ್ಗೇಶ್​ ಅವಸರದ ನಡಿಗೆಯಿಂದ ಕಾಲು ಮುರಿದುಕೊಂಡಿದ್ದಾರೆ‌. ಈ ವಿಷಯವನ್ನು ನಟ ಸೋಷಿಯಲ್​ ಮೀಡಿಯಾ ಮೂಲಕ ತಿಳಿಸಿದ್ದಾರೆ.

ನಟ ಹಾಗೂ ರಾಜ್ಯಸಭಾ ಸದಸ್ಯರಾಗಿರುವ ನವರಸ ನಾಯಕ ಜಗ್ಗೇಶ್​ ಅವಸರದ ನಡಿಗೆಯಿಂದ ಕಾಲು ಮುರಿದುಕೊಂಡಿದ್ದಾರೆ‌ ಈ ವಿಷಯವನ್ನು ಸ್ವತಃ ಜಗ್ಗೇಶ್ ಅವರೇ ಸೋಷಿಯಲ್ ಮೀಡಿಯಾದ ಮೂಲಕ ತಿಳಿಸಿದ್ದಾರೆ ಕಾಲು ಮುರಿದುಕೊಂಡು ಚಿಕಿತ್ಸೆ ಪಡೆದುಕೊಂಡಿರುವ ಫೋಟೋವನ್ನು ಹಂಚಿಕೊಂಡಿರುವ ಅವರು ಸಣ್ಣ ಅಚಾತುರ್ಯ ನಡಿಗೆಯಿಂದ ಪಾದದ ಮೂಳೆ ಮುರಿತ 6 ವಾರದ ದಿಘ್ಭಂಧನ ನಡಿಗೆಗೆ ಎಂದು ಬರೆದುಕೊಂಡಿದ್ದಾರೆ.
ಇತ್ತೀಚೆಗಷ್ಟೇ ನಟ ಜಗ್ಗೇಶ್​ ಅಭಿನಯದ ರಾಘವೇಂದ್ರ ಸ್ಟೋರ್ಸ್​ ಸಿನಿಮಾ ಬಿಡುಗಡೆಯಾಗಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು ಫ್ಯಾಮಿಲಿ ಆಡಿಯನ್ಸ್​ಗೆ ಖುಷಿ ನೀಡಿತ್ತು ಆದರೆ ಅಂದುಕೊಂಡ ಮಟ್ಟದಲ್ಲಿ ಯಶಸ್ಸು ಕಾಣಲಿಲ್ಲ ಈ ಸಿನಿಮಾದಲ್ಲಿ ಜಗ್ಗೇಶ್​ ಪ್ರಬುದ್ಧ ನಟನ ಪಾತ್ರದಲ್ಲಿ ನಟಿಸಿದ್ದರು ಸದ್ಯ ಅವರು ನಿರ್ದೇಶಕ ಗುರುಪ್ರಸಾದ್ ಅವರ ರಂಗನಾಯಕ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ ಈ ಚಿತ್ರದಲ್ಲಿ ವಿಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್​ಗಳು ಬಿಡುಗಡೆಯಾಗಿದ್ದು ಸಿನಿಮಾ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ ಸದ್ಯ ಜಗ್ಗೇಶ್​ ಅಚಾತುರ್ಯದಿಂದ ಕಾಲು ಮುರಿದುಕೊಂಡಿದ್ದು 6 ವಾರ ರೆಸ್ಟ್​ನಲ್ಲಿದ್ದಾರೆ ಆದಷ್ಟು ಬೇಗ ತಮ್ಮ ನೆಚ್ಚಿನ ನಟ ಗುಣಮುಖರಾಗಲಿ ಎಂದು ಜಗ್ಗೇಶ್​ ಅಭಿಮಾನಿಗಳು ಸೋಷಿಯಲ್​ ಮೀಡಿಯಾದ ಮೂಲಕ ಹಾರೈಸಿದ್ದಾರೆ.

Leave a Reply

error: Content is protected !!