ಚಾರ್ಮಾಡಿ ಬಸ್ ತಡೆದ ಘಟನೆ,ಕರ್ತವ್ಯಕ್ಕೆ ಅಡ್ಡಿ ದೂರು:ಮೂವರು ವಶಕ್ಕೆ

ಶೇರ್ ಮಾಡಿ

ಉಜಿರೆ: ಚಾರ್ಮಾಡಿಯಲ್ಲಿ ಬಸ್ ತಡೆ ಹಿಡಿದು ಗಲಾಟೆ ಎಬ್ಬಿಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಬಗ್ಗೆ ಬಸ್ ನಿರ್ವಾಹಕ ದೂರು ನೀಡಿದ್ದು ಮೂವರನ್ನು ಧರ್ಮಸ್ಥಳ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಶನಿವಾರ ಸಂಜೆ ಮಂಗಳೂರಿನಿಂದ ಮೂಡಿಗೆರೆಗೆ ತೆರಳುತ್ತಿದ್ದ ಮೂಡಿಗೆರೆ ಡಿಪೋದ ಕೆ ಎಸ್ ಆರ್ ಟಿ ಸಿ ಬಸ್ ಗೆ ಉಜಿರೆಯಲ್ಲಿ ಹತ್ತಿದ ಚಾರ್ಮಾಡಿ ಕಡೆಯ ವಿದ್ಯಾರ್ಥಿಗಳು ಬಾಗಿಲಲ್ಲಿ ನೇತಾಡುತ್ತಿದ್ದ ಸಂದರ್ಭ ನಿರ್ವಾಹಕ ಶಿವ ಕುಮಾರ್ ಅವರನ್ನು ಬಸ್ ಒಳಗೆ ಹೋಗುವಂತೆ ಅಥವಾ ಹಿಂದಿನಿಂದ ಬರುವ ಬಸ್ ನಲ್ಲಿ ಬರಲು ತಿಳಿಸಿದಾಗ ಮಾತಿನ ಚಕಮಕಿ ಉಂಟಾಯಿತು ಹಾಗೂ ಬಳಿಕ ಬಸ್ ಮುಂದೆ ತೆರಳಿದಾಗ ಚಾರ್ಮಾಡಿ ಬಳಿ ಬಸ್ ನ್ನು ಗುಂಪೊಂದು ತಡೆ ಹಿಡಿದು ಅಲ್ಲಿ ಮತ್ತೆ ಗಲಾಟೆ ಉಂಟಾದ ಕುರಿತು ದೂರಿನಲ್ಲಿ ಹೇಳಲಾಗಿದೆ.
ಘಟನೆಗೆ ಸಂಬಂಧ ಪಟ್ಟಂತೆ ಪೊಲೀಸರು ಚಾರ್ಮಾಡಿ ಗ್ರಾಮದ ಮಹಮ್ಮದ್ ಶಬೀರ್(21), ಮಹಮ್ಮದ್ ಮಹಾರೂಫ್(22) ಹಾಗೂ ಮಹಮ್ಮದ್ ಮುಬಶೀರ್(23)ಎಂಬವರನ್ನು ಭಾನುವಾರ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

Leave a Reply

error: Content is protected !!