ಸ್ಕೂಟರ್‌ಗೆ ಢಿಕ್ಕಿ ಹೊಡೆದು ನಿಯಂತ್ರಣ ತಪ್ಪಿದ ಕಾರು ಬಸ್‌ ನಿಲ್ದಾಣಕ್ಕೆ ಢಿಕ್ಕಿ

ಶೇರ್ ಮಾಡಿ

ಉಳ್ಳಾಲ :ಕಾರೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದು ಚಾಲಕನ ನಿಯಂತ್ರಣ ತಪ್ಪಿದ ಕಾರು ಬಸ್ಸು ತಂಗುದಾಣಕ್ಕೆ ಗುದ್ದಿದ ಘಟನೆ ಕೊಣಾಜೆ ಪೊಲೀಸ್‌ ಠಾಣಾ ವ್ಯಾಪ್ತಿಯ ತೌಡುಗೋಳಿ ಕ್ರಾಸ್‌ನ ಜಂಕ್ಷನ್‌ನಲ್ಲಿ ಸೋಮವಾರ ನಡದಿದ್ದು, ಸ್ಕೂಟರ್‌ ಸವಾರ ಸಣ್ಣಪುಟ್ಟ ಗಾಯಗಳಿಂದ ಪಾರಾದರೆ, ಬಸ್ಸು ತಂಗುದಾಣದಲ್ಲಿ ಇದ್ದ ಇಬ್ಬರು ಮಹಿಳಾ ಪ್ರಯಾಣಿಕರು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.

ನರಿಂಗಾನ ಗ್ರಾಮದ ಶಾಂತಿಪಳಿಕೆ ನಿವಾಸಿ ಅಶ್ರಫ್‌ ವಿದೇಶದಿಂದ ಬೆಂಗಳೂರಿಗೆ ಬಂದು ಅಲ್ಲಿಂದ ಬೆಳಗ್ಗೆ ಕಾರಿನಲ್ಲಿ ಮನೆಗೆ ಬರುತ್ತಿದ್ದರು. ಇನ್ನೇನು ಎರಡು ಕಿ. ಮೀ. ದೂರ ಸಂಚರಿಸಿದರೆ ಮನೆ ತಲುಪಬೇಕಿತ್ತು. ಸಂಬಂಧಿ ಕಾರು ಚಲಾಯಿಸುತ್ತಿದ್ದು ಜಂಕ್ಷನ್‌ನಲ್ಲಿ ಬಲಕ್ಕೆ ತಿರುಗಿಸುತ್ತಿದ್ದಂತೆ ಒಳರಸ್ತೆಯಿಂದ ಬಂದ ಸ್ಕೂಟರ್‌ಗೆ ಕಾರು ಡಿಕ್ಕಿ ಹೊಡೆದಿದ್ದು, ಸ್ಕೂಟರ್‌ ಸವಾರನನ್ನು ತಪ್ಪಿಸುವ ಭರದಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ಬಸ್ಸು ತಂಗುದಾಕ್ಕೆ ಬಡಿದು ನಿಂತಿದೆ.
ಈ ಸಂದರ್ಭದಲ್ಲಿ ಬಸ್ಸು ತಂಗುದಾಣದಲ್ಲಿದ್ದ ಇಬ್ಬರು ಮಹಿಳಾ ಪ್ರಯಾಣಿಕರು ತಂಗುದಾಣದ ಮೂಲೆಗೆ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

error: Content is protected !!