ಪುತ್ತೂರು ರೋಟರಿ ಕ್ಲಬ್ ನ ಸೂಪರ್ ಸ್ಪೆಷಾಲಿಟಿ ರೋಟರಿ ಕಣ್ಣಿನ ಆಸ್ಪತ್ರೆ ಉದ್ಘಾಟನೆ

ಶೇರ್ ಮಾಡಿ

ಪುತ್ತೂರು: ರೋಟರಿ ಸಂಸ್ಥೆಗಳ ಆಶ್ರಯದಲ್ಲಿ ಸೂಪರ್ ಸ್ಪೆಷಾಲಿಟಿ ರೋಟರಿ ಕಣ್ಣಿನ ಆಸ್ಪತ್ರೆ ರೋಟರಿ ಬ್ಲಡ್ ಬ್ಯಾಂಕ್ ಕಟ್ಟಡದ ತಳ ಅಂತಸ್ತಿನಲ್ಲಿ ಬುಧವಾರ ಉದ್ಘಾಟನೆಗೊಂಡಿತು.

ರೋಟರಿ ಅಂತರಾಷ್ಟ್ರೀಯ ನಿರ್ದೇಶಕ ಮಹೇಶ್ ಕಣ್ಣಿನ ಆಸ್ಪತ್ರೆಯನ್ನು ಉದ್ಘಾಟಿಸಿದರು. ಶಾಸಕ ಅಶೋಕ್ ಕುಮಾರ್ ರೈ ದೀಪ ಬೆಳಗಿಸಿದರು. ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಮೋಡ್ಯುಲರ್ ಒಟಿಯನ್ನು ಉದ್ಘಾಟಿಸಿದರು. ಅಂತರಾಷ್ಟ್ರೀಯ ರೋಟರಿ ಚೆಯರ್ ಮ್ಯಾನ್ ರವಿ ನಡ್ಲಮನಿ ಡೆ ಕೇರ್ ಸೆಂಟರನ್ನು ಉದ್ಘಾಟಿಸಿದರು.

ಮಾಜಿ ಶಾಸಕ ಸಂಜೀವ ಮಠಂದೂರು, ರೋಟರಿ ಫೌಂಡೇಶನ್ ಚೆಯರ್ ಮ್ಯಾನ್ ಡಾ.ಕೆ.ಸೂರ್ಯನಾರಾಯಣ, ಪ್ರಸಾದ್ ನೇತ್ರಾಲಯದ ಡಾ.ಕೃಷ್ಣ ಪ್ರಸಾದ್ ಕೆ., ರೋಟರಿ ಜಿಲ್ಲಾ ಅಸಿಸ್ಟೆಂಟ್ ಗವರ್ನರ್ ಎ.ಜಗಜೀವನ್ ದಾಸ್ ರೈ, ರೋಟರಿ ಕ್ಲಬ್ ಪ್ರಾಜೆಕ್ಟ್ ಚೆಯರ್ ಮ್ಯಾನ್ ಡಾ.ಭಾಸ್ಕರ್ ಎಸ್., ರೋಟರಿ ಕ್ಲಬ್ ಅಧ್ಯಕ್ಷ ಉಮಾನಾಥ್‍ಪಿ.ಬಿ., ಕಾರ್ಯದರ್ಶಿ ಡಾ.ಶ್ರೀಪ್ರಕಾಶ್, ಮಾಜಿ ಅಧ್ಯಕ್ಷ ಝೇವಿಯರ್ ಡಿ’ಸೋಜಾ ಮುಂತಾದವರು ಉಪಸ್ಥಿತರಿದ್ದರು. ಪ್ರೊ.ವಿ.ಜೆ.ಫೆರ್ನಾಂಡೀಸ್ ಕಾರ್ಯಕ್ರಮ ನಿರೂಪಿಸಿದರು.

Leave a Reply

error: Content is protected !!