ನೆಲ್ಯಾಡಿ ಉದ್ಯಮಿಯ ಕಾರು ಅಪಘಾತ; ಸಣ್ಣ ಪುಟ್ಟ ಗಾಯ

ಶೇರ್ ಮಾಡಿ

ರಾಷ್ಟ್ರೀಯ ಹೆದ್ದಾರಿ 75ರ ಉದನೆಯ ಬಳಿ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿ ಇದ್ದ ಜಲ್ಲಿ ರಾಶಿಗೆ ಡಿಕ್ಕಿ ಹೊಡೆದ ಘಟನೆ ಇಂದು ಮಧ್ಯಾಹ್ನ ಸಂಭವಿಸಿದೆ.

ನೆಲ್ಯಾಡಿಯ ಉದ್ಯಮಿ ಶಿಬು ವರ್ಗೀಸ್ ಅವರು ಪ್ರಯಾಣಿಸುತ್ತಿದ್ದ ಕಾರು ಇದಾಗಿದ್ದು. ಘಟನೆಯಲ್ಲಿ ಶಿಬು ವರ್ಗೀಸ್ ಅವರು ಸಣ್ಣ ಪುಟ್ಟ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಕಾರು ಸಂಪೂರ್ಣ ಜಖಂಗೊಂಡಿದೆ.
ನೆಲ್ಯಾಡಿ ಪೋಲಿಸ್ ಠಾಣೆಯ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Leave a Reply

error: Content is protected !!