ಜೇಸಿಐ ಪಂಜ ಪಂಚಶ್ರೀ ದೇವಳದ ಗದ್ದೆಯಲ್ಲಿ ನಾಟಿ

ಶೇರ್ ಮಾಡಿ

ಪಂಜ: ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ಪಂಜದಲ್ಲಿ ಜೇಸಿಐ ಪಂಜ ಪಂಚಶ್ರೀ ಯ ಬೆಳ್ಳಿ ಹಬ್ಬದ ಸವಿನೆನಪಿಗಾಗಿ ದಾನಿಗಳಿಂದ ಪ್ರಾಯೋಜಿತ ದೇವರ ಗದ್ದೆಯಲ್ಲಿ ಎರಡನೇ ವರ್ಷ ಸಾಗುವಳಿ ಮಾಡಲಾಯಿತು. ಜೇಸಿಐ ಪಂಜ ಪಂಚಶ್ರೀ ಹಾಗೂ ಶ್ರೀ ಪರಿವಾರ ಪಂಚಲಿಗೇಶ್ವರ ದೇವಸ್ಥಾನ ಪಂಜ ಇವುಗಳ ಜಂಟಿ ಆಶ್ರಯದಲ್ಲಿ ದೇವಳದ ಗದ್ದೆಯಲ್ಲಿ ನಾಟಿ ಮಾಡಲಾಯಿತು.

ಜೇಸಿಐ ಪಂಜ ಪಂಚಶ್ರೀಯ ಪೂರ್ವ ಅಧ್ಯಕ್ಷರಾದ ಜೇಸಿ.ತೀರ್ಥಾನಂದ ಕೊಡಂಕಿರಿಯವರ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ನಡೆದ ಈ ನಾಟಿ ಕಾರ್ಯಕ್ರಮದಲ್ಲಿ ಜೇಸಿಐ ಪಂಜ ಪಂಚಶ್ರೀಯ ರಜತ ವರ್ಷದ ಅಧ್ಯಕ್ಷರಾದ ಜೇಸಿ.ಶಿವಪ್ರಸಾದ್ ಹಾಲೆಮಜಲು, ಪೂರ್ವ ಅಧ್ಯಕ್ಷರಾದ ಶಶಿಧರ ಪಳಂಗಾಯ, ಸುದರ್ಶನ ಪಟ್ಟಾಜೆ ಸದಸ್ಯರಾದ ಗಗನ್ ಕಿನ್ನಿಕುಮೇರಿ, ತೀರ್ಥಪ್ರಸಾದ್ ಪಲ್ಲತಡ್ಕ, ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯದ ಆಡಳಿತ ಮಂಡಳಿ ಸದಸ್ಯರಾದ ಲಕ್ಷ್ಮಣ ಗೌಡ ಅಕ್ರಿಕಟ್ಟೆ, ಶ್ರೀಮತಿ ಸೌಮ್ಯ ರಾಮಕೃಷ್ಣ ಕರಿಕ್ಕಳ ಪಂಬೆತ್ತಾಡಿ ಅಮೃತ ಮಹಿಳಾ ಮಂಡಲದ ಅಧ್ಯಕ್ಷರಾದ ಶ್ರೀಮತಿ ಅನಿತಾಕುಲ್ದೀಪ್ ಸುತ್ತುಕೋಟೆ, ಪೂರ್ವಅಧ್ಯಕ್ಷರಾದ ರತಿದೇವಿ ಜಾಕೆ ಉಪಸ್ಥಿತರಿದ್ದರು.

ಶ್ರೀ ವಿಶ್ವನಾಥ ಜಾಕೆ, ಶ್ರೀ ರಾಮಕೃಷ್ಣ ಕರಿಕ್ಕಳ, ಭಾಗೀರಥಿ ಗೋಳಿಕಟ್ಟೆ ಕುಸುಮ ಮಡಪ್ಪಾಡಿ, ರತಿ ಮಡಪ್ಪಾಡಿ ಹಾಗೂ ದೇವಳದ ಸಿಬ್ಬಂದಿಗಳಾದ ಸಂತೋಷ್, ಕೃಷ್ಣಪ್ಪ ಹಾಗೂ ಸುಂದರ ರವರು ಸಹಕರಿಸಿದರು.

Leave a Reply

error: Content is protected !!