ನೆಲ್ಯಾಡಿ: ಐ ಐ ಸಿ ಟಿ ವಿದ್ಯಾಸಂಸ್ಥೆಯಲ್ಲಿ ತರಬೇತಿ ಪಡೆದ 2 ವಿದ್ಯಾರ್ಥಿಗಳು ಜವಾಹರ್ ನವೋದಯ ವಿದ್ಯಾಲಯಕ್ಕೆ ಆಯ್ಕೆ

ಶೇರ್ ಮಾಡಿ

ನೆಲ್ಯಾಡಿ: ಇಲ್ಲಿ ಕಳೆದ 14 ವರುಷಗಳಿಂದ ಕಾರ್ಯಾಚರಿಸುತ್ತಿರುವ ಐಐಸಿಟಿ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್, ಟ್ಯೂಷನ್, ನವೋದಯ ಕೋಚಿಂಗ್, ಅಬಾಕಸ್ ಇತ್ಯಾದಿ ತರಬೇತಿಯನ್ನು ನೀಡುತ್ತಾ ಬರುತ್ತಿದ್ದು.

ಕಳೆದ ಏಪ್ರಿಲ್ ನಲ್ಲಿ ನಡೆದ 2023-24 ನೇ ಸಾಲಿನ ನವೋದಯ ಆರನೇ ತರಗತಿ ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಐಐಸಿಟಿ ವಿದ್ಯಾ ಸಂಸ್ಥೆಯಲ್ಲಿ ತರಬೇತಿ ಪಡೆದ ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾ ಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ನೆಲ್ಯಾಡಿ ಸಮೀಪದ ಮಕ್ಕಿಗದ್ದೆ ಗೋಪಾಲ ಗೌಡ ಹಾಗೂ ಶ್ರೀಮತಿ ವಿನಯ ಅವರ ಮಗ ಗೌರವ್.ಜಿ.ಎಮ್ ಮತ್ತು ಬಾಲಕೃಷ್ಣ ಗೌಡ ಹಾಗೂ ಶ್ರೀಮತಿ ತಾರಾದೇವಿ ಅವರ ಮಗ ಸಮೃದ್ಧ್ ಆಯ್ಕೆಯಾದ ವಿದ್ಯಾರ್ಥಿಗಳು.
2024-25 ನೇ ಸಾಲಿನ ನವೋದಯ ಕೋಚಿಂಗ್ ಆರಂಭಗೊಂಡಿರುತ್ತದೆ. ಸೇರ ಬಯಸುವ ಆಸಕ್ತ ವಿದ್ಯಾರ್ಥಿಗಳು 9448409912 ನಂಬರಿಗೆ ಸಂಪರ್ಕಿಸಿ.

Leave a Reply

error: Content is protected !!