ಶ್ರೀರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ವಿಶೇಷ ಉಪನ್ಯಾಸ

ಶೇರ್ ಮಾಡಿ

ಶ್ರೀರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆಯಲ್ಲಿ ರಾಷ್ಟ್ರ ನಿರ್ಮಾಣದಲ್ಲಿ ಯುವ ಜನಾಂಗದ ಪಾತ್ರ ಎಂಬ ವಿಷಯದ ಕುರಿತಾಗಿ ಉಪನ್ಯಾಸ ಕಾರ್ಯಕ್ರಮವು ನಡೆಯಿತು.

ಈ ಉಪನ್ಯಾಸವನ್ನು ಮುಂಬೈ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥರಾದ ಡಾ.ವಸಂತಕುಮಾರ್ ತಾಳ್ತಜೆ ಇವರು ನೆರವೇರಿಸಿದರು. ಅವರು ಮಾತನಾಡುತ್ತಾ “ಯುವ ಜನಾಂಗಕ್ಕೆ ಮಹತ್ತರವಾದ ಜವಾಬ್ದಾರಿ ಇದೆ. ಅದುವೇ ಸದೃಢವಾದ ರಾಷ್ಟ್ರ ನಿರ್ಮಾಣದ ಜವಾಬ್ದಾರಿ. ವಿದ್ಯಾರ್ಥಿಗಳೆಲ್ಲರೂ ಕೂಡ ತಮ್ಮತನದ ಅರಿವನ್ನ ಮಾಡಿಕೊಳ್ಳಬೇಕು. ಪ್ರಾದೇಶಿಕವಾಗಿ ಇರುವಂತಹ ಸಂಸ್ಕೃತಿಯ ಅನುಷ್ಠಾನವೇ ರಾಷ್ಟ್ರ ನಿರ್ಮಾಣಕ್ಕೆ ಬುನಾದಿಯಾಗಿದೆ. ಭಾಷೆ, ಸಂಸ್ಕೃತಿ, ಆಚಾರ ವಿಚಾರಗಳನ್ನು ಕಡೆಗಣನೆ ಮಾಡದೆ ಅವುಗಳನ್ನು ಆಚರಣೆಗೆ ತಂದರೆ ಮೂಲ ಬೇರುಗಳಿಂದಲೇ ರಾಷ್ಟ್ರವೆಂಬ ಮರ ಸದೃಢವಾಗುವುದು. ಇಂತಹ ಮಹತ್ತರವಾದ ಜವಾಬ್ದಾರಿಯನ್ನ ಹೊತ್ತುಕೊಂಡು ಮುನ್ನಡೆಯಬೇಕಾದ ಕೆಲಸ ಯುವಕರಿಂದ ಆಗಬೇಕು” ಎಂದು ಕರೆಯನ್ನ ಕೊಟ್ಟರು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಚಂದ್ರಶೇಖರ್ ಕೆ, ಹೈಸ್ಕೂಲ್ ವಿಭಾಗದ ಪ್ರವೀಣ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಾಪಕಿಯಾದ ಶ್ರೀಮತಿ ನಿಶ್ಚಿತ ಇವರು ಸ್ವಾಗತಿಸಿದರು. ಪ್ರಾಂಶುಪಾಲರಾದ ಚಂದ್ರಶೇಖರ್ ಕೆ ವಂದಿಸಿದರು. ಕಾಲೇಜಿನ ಉಪನ್ಯಾಸಕರಾದ ಚೇತನ್ ಎಂ ಕಾರ್ಯಕ್ರಮ ನಿರೂಪಿಸಿದರು.

Leave a Reply

error: Content is protected !!