ಉಜಿರೆ: ಪ್ರಾಚೀನ ಇತಿಹಾಸದೊಂದಿಗೆ ಬೆರೆತಿರುವ ಭಾಷೆ ಸಂಸ್ಕೃತ. ವೈದಿಕ ಕಾಲದಲ್ಲಿಯೇ ಸಂಸ್ಕೃತದ ಔನತ್ಯವನ್ನು ಮನಗಾಣಬಹುದು. ಪಾಣಿನಿ ಮುಂತಾದ ವ್ಯಾಕರಣಕಾರರಿಂದ ಸಂಸ್ಕೃತವು ಶಿಸ್ತುಬದ್ಧವಾಗಿ ಬೆಳೆದುಬಂದಿದೆ. ಹೆಚ್ಚಿನ ಅರಿವು ಉಂಟಾಗಲು ಈಗ ಸಂಸ್ಕೃತ ಭಾಷೆಯ ಬಗ್ಗೆ ಸೂಕ್ತ ಅಧ್ಯಯನವಾಗಬೇಕು ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರಮೋದ್ ಕುಮಾರ್ ಅವರು ಹೇಳಿದರು.
ಇವರು ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಸಂಸ್ಕೃತ ಸಂಘ ಹಾಗೂ ಸಂಸ್ಕೃತ ಅಂತರಾಧ್ಯಯನ ವೃತ್ತಮ್ ಇವುಗಳ ಪದಾಧಿಕಾರಿಗಳ ಪದ ಪ್ರದಾನ ಮಾಡಿ ಮಾತನಾಡಿದರು.
ವಿದ್ಯಾರ್ಥಿಗಳಿಂದ ಸಮೂಹ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು.
ಸಂಸ್ಕೃತ ಸಂಘದ ಅಧ್ಯಕ್ಷ ಆದಿತ್ಯ ಹೆಗಡೆ, ಉಪಾಧ್ಯಕ್ಷೆ ಹಿರಣ್ಮಯಿ ಶೆಟ್ಟಿ, ಅಂತರಾಧ್ಯಯನ ವೃತ್ತಂ ಇದರ ಸಂಯೋಜಕರಾದ ಅಂಜಲಿ ಹಾಗೂ ಪ್ರೀತಮ್ ಮೆನೇಜಸ್ ತಂಡಕ್ಕೆ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.
ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ.ಪ್ರಸನ್ನಕುಮಾರ ಐತಾಳ್ ಸ್ವಾಗತಿಸಿದರು. ಅಕ್ಷತಾ ಎಂ.ಜಿ ನಿರೂಪಿಸಿ, ಆದಿತ್ಯ ಹೆಗಡೆ ವಂದಿಸಿದರು.