ಅಕ್ಕಿ ಸಂಗ್ರಹವಾಗುವವರೆಗೆ ಹಣ ನೀಡಲು ತೀರ್ಮಾನಿಸಿದ ಸರಕಾರ

ಶೇರ್ ಮಾಡಿ

ಬೆಂಗಳೂರು : ರಾಜ್ಯ ಸರಕಾರ ಮಹತ್ವದ ಗ್ಯಾರಂಟಿಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಗೆ ಅಕ್ಕಿಯನ್ನು ಇತರ ರಾಜ್ಯಗಳಿಂದ ಖರೀದಿಸಿ ತರುವಲ್ಲಿ ವಿಫಲವಾಗಿದ್ದು, ಅಕ್ಕಿಯ ಬದಲಿಗೆ ಜನರಿಗೆ ಹಣ ನೀಡಲು ತೀರ್ಮಾನಿಸಿದೆ.

ಬುಧವಾರ ನಡೆದ ಸಂಪುಟ ಸಭೆಯಲ್ಲಿ ಸರಕಾರ ಅಕ್ಕಿಯ ಬದಲು ಬಿಪಿಎಲ್ ಕಾರ್ಡುದಾರರಿಗೆ ತಲಾ 5 ಕೆಜಿ ಅಕ್ಕಿಯ ಬದಲಾಗಿ ಕೆಜಿ ಗೆ 34 ರೂಪಾಯಿಯಂತೆ 170 ರೂಪಾಯಿ ಹಣ ನೀಡಲಿದೆ.
ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರವನ್ನು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್. ಮುನಿಯಪ್ಪ ಅವರು ಸರಕಾರದ ತೀರ್ಮಾನವನ್ನು ಘೋಷಿಸಿದ್ದಾರೆ. ಹಣವನ್ನು ಕುಟುಂಬದ ಖಾತೆಗೆ ಜಮೆ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ಅಗತ್ಯವಿರುವ ಅಕ್ಕಿ ಸಂಗ್ರಹವಾಗುವವರೆಗೆ ಹಣ ನೀಡಲಾಗುವುದು ಎಂದು ಸರಕಾರ ತೀರ್ಮಾನ ಕೈಗೊಂಡಿದೆ.

Leave a Reply

error: Content is protected !!