ವಿಟ್ಲ: 15 ದಿನಗಳ ಹಿಂದೆಯಷ್ಟೇ ಹೆರಿಗೆಯಾದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲ ಸಮೀಪದ ಜೋಗಿಮಠ ಎಂಬಲ್ಲಿ ನಡೆದಿದೆ.
ಅನಿಶಾ (34) ಮೃತಪಟ್ಟ ಮಹಿಳೆ. ಅನಿಶಾ ಅವರಿಗೆ 15 ದಿನಗಳ ಹಿಂದಷ್ಟೆ ಮೂರನೇ ಹೆರಿಗೆಯಾಗಿದ್ದು, ಹೆರಿಗೆಯ ನಂತರದ ದಿನದಿಂದ ಯಾವುದೋ ಕಾರಣದಿಂದ ಮನಸ್ಸಿನಲ್ಲಿ ನೊಂದುಕೊಂಡಿದ್ದರು.
ಜೀವನದಲ್ಲಿ ಜಿಗುಪ್ಸೆಗೊಂಡು ಜೋಗಿಮಠ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆಕೆಯ ಮರಣದಲ್ಲಿ ಬೇರೆ ಯಾವುದೇ ರೀತಿಯ ಸಂಶಯವಿಲ್ಲ ಎಂದು ಆಕೆಯ ಸಹೋದರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.