ಕುವೆಟ್ಟು ಗ್ರಾಮದ ಮದ್ದಡ್ಕದ ನೇರಳಕಟ್ಟೆ ಎಂಬಲ್ಲಿ ಮನೆಯಲ್ಲಿ ಯಾರು ಇಲ್ಲದ ಸಮಯ ನಗ-ನಗದು ದೋಚಿದ ಘಟನೆ ಜೂ.27ರಂದು ನಡೆದಿದೆ.
ಪ್ರಸನ್ನಕುಮಾರ್ ಎಂಬವರು ಬೆಳಿಗ್ಗೆ 8.30ಕ್ಕೆ ಮನೆಗೆ ಬೀಗ ಹಾಕಿ ಹೋಗಿದ್ದು ರಾತ್ರಿ 10.30 ರ ವೇಳೆಗೆ ಹಿಂದಿರುಗಿ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ಮನೆಯ ಬೀಗ ಮುರಿದ ಕಳ್ಳರು ರೂ.8,000 ನಗದು ಹಾಗೂ ಕಪಾಟಿನಲ್ಲಿ ಇರಿಸಿದ್ದ ರೂ.1.40ಲಕ್ಷ ಮೌಲ್ಯದ ಚಿನ್ನಾಭರಣವನ್ನು ದೋಚಿದರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.