ಸುಬ್ರಹ್ಮಣ್ಯ: ಭಾರತದಲ್ಲಿ ರಾಷ್ಟ್ರೀಯ ವಿಮಾ ಅರಿವು ದಿನಾಚರಣೆಯನ್ನು ಜೂ.28 ರಂದು ಆಚರಿಸಲಾಗುತ್ತದೆ ಆ ಪ್ರಯುಕ್ತ ಕುಕ್ಕೆಶಿ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ವಾಣಿಜ್ಯಶಾಸ್ತ್ರ ಮತ್ತು ಉದ್ಯಮ ಆಡಳಿತ ವಿಭಾಗದಿಂದ ವಿಮಾ ದಿನಾಚರಣೆಯನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ದಿನೇಶ್ ಪಿ.ಟಿ. ಇವರು ವಹಿಸಿದ್ದರು, ಮುಖ್ಯ ಅತಿಥಿಯಾಗಿ ಅತಿಥಿಯಾಗಿ ಎಲ್ಐಸಿಯ ಸುಳ್ಯ ವಿಭಾಗದ ಅಭಿವೃದ್ಧಿ ಅಧಿಕಾರಿಯ ಆಗಿರುವ ಗಣೇಶ್ ಹೆಗಡೆ ಇವರು ಮಾತನಾಡಿ ವಿಮೆಯಲ್ಲಿರುವ ಪ್ರಯೋಜನಗಳು, ಅದರ ಸೌಲಭ್ಯಗಳು, ಬದುಕಿನಲ್ಲಿ ವಿಮೆಯ ಪ್ರಾಮುಖ್ಯತೆ ವಿವರಿಸಿದರು.
ಕಾರ್ಯಕ್ರಮದಲ್ಲಿ ವಾಣಿಜ್ಯ ಶಾಸ್ತ್ರ ಮತ್ತು ಉದ್ಯಮಡಳಿತ ವಿಭಾಗದ ಮುಖ್ಯಸ್ಥರಾದ ಲತಾ. ಬಿ. ಟಿ, ಆಂತರಿಕ ಗುಣಮಟ್ಟದ ಸಂಯೋಜಕ ರಾದ ಡಾ.ಗೋವಿಂದ ಎನ್ಎಸ್ ಮತ್ತು ಉಪನ್ಯಾಸಕರಾದ ವಿನ್ಯಾಸ್ ಹೋಸೋಳಿಕೆ ಇವರು ಉಪಸ್ಥಿತರಿದ್ದರು.