ಮಂಗಳೂರು: ನಿರಂತರವಾಗಿ ಸುರಿದ ಮಳೆಯಿಂದಾಗಿ ಮಂಗಳೂರಿನಲ್ಲಿ ಬೃಹತ್ ಗಾತ್ರದ ಅಶ್ವಥಮರ ಹಾಗು ಸಂಪಿಗೆ ಮರವೊಂದು ಬುಡ ಸಮೇತ ಕಿತ್ತು ಬಿದ್ದ ಘಟನೆ ನಡೆದಿದೆ.
ನಗರದ ಯೆಯ್ಯಾಡಿ ಜಂಕ್ಷನ್ ನಿಂದ ದಂಡಕೇರಿಗೆ ಹೋಗುವ ಒಳ ರಸ್ತೆಯಲ್ಲಿ ಮರಗಳು ಅಡ್ಡಲಾಗಿ ಬಿದ್ದಿದೆ.
ಸ್ಥಳಕ್ಕೆ ಭೇಟಿ ನೀಡಿದ ಕದ್ರಿ ಅಗ್ನಿಶಾಮಕದಳ ಠಾಣೆಯ ಸಿಬ್ಬಂದಿಗಳು, ಮೆಸ್ಕಾಂ ಇಲಾಖೆಯ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ ಮರ ತೆರವು ಗೊಳಿಸಿದರು.
ಘಟನೆಯಲ್ಲಿ ಸಮೀಪದಲ್ಲಿರುವ ವಾಣಿಜ್ಯ ಕಟ್ಟಡಗಳಿಗೆ ಅಲ್ಪ ಪ್ರಮಾಣದ ಹಾನಿ ಉಂಟಾಗಿದೆ.