

ಪುತ್ತೂರು: ಸರ್ವೋದಯ ಪ್ರೌಢ ಶಾಲೆ ಸುಳ್ಯಪದವು ಇಲ್ಲಿ ಮಧುವನ ಡಾ. ಕೆ.ಪಿ.ಬಾಲಕೃಷ್ಣ ರೈ ಸ್ಮರಣಾರ್ಥ ಜು.3ರಂದು ನಡೆದ ಪುತ್ತೂರು ತಾಲೂಕು ಮಟ್ಟದ ಅಂತರ್ ಪ್ರೌಢ ಶಾಲಾ ವಿದ್ಯಾರ್ಥಿಗಳ ಜಾನಪದ ಗೀತೆ ಸಮೂಹ ಸ್ಪರ್ಧೆಯಲ್ಲಿ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿಯ ಅಮೋಘ ಕೃಷ್ಣ, ಅಭಿಷೇಕ ಹರ್ಷ ಮತ್ತು ಧನ್ವಿತ್ ಇವರ ತಂಡ ತೃತೀಯ ಬಹುಮಾನ ಗಳಿಸಿರುತ್ತಾರೆ.

ತಾಲೂಕಿನ ಸುಮಾರು 20 ತಂಡಗಳು ಭಾಗವಹಿಸಿದ ಈ ಸ್ಪರ್ಧೆಯಲ್ಲಿ ವಿಜೇತರು ಪ್ರಶಸ್ತಿ ಪತ್ರ ಹಾಗೂ ರೂ 1200 ನಗದು ಪುರಸ್ಕಾರ ಪಡೆದಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

