ಗುಡ್ಡ ಜರಿದು ಮನೆಗೆ ಹಾನಿ;ಅಪಾಯದಿಂದ ಪಾರಾದ ಮನೆ ಮಂದಿ

ಶೇರ್ ಮಾಡಿ

ಸುಳ್ಯ ಪದವು: ಪಡುವನ್ನೂರು ಗ್ರಾಮದ ಕನ್ನಡ್ಕ ಎಂಬಲ್ಲಿ ಗುಡ್ಡ ಜರಿದು ಮನೆಗೆ ಹಾನಿ ಸಂಭವಿಸಿದ್ದು ಮನೆಯಲ್ಲಿದ್ದವರು ಅಪಾಯದಿಂದ ಪಾರಾದ ಘಟನೆ ಜು.6ರ ಗುರುವಾರ ನಡೆದಿದೆ.

ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಗುಡ್ಡ ಜರಿದು ರಾಘವ ಗೌಡ ಎಂಬವರ ಮನೆಯ ಹಿಂಭಾಗಕ್ಕೆ ಗುಡ್ಡ ಬಿದ್ದು ಗೋಡೆ ಹಾಗೂ ಮೇಲ್ಚಾವಣಿಗೆ ಹಾನಿ ಸಂಭವಿಸಿದೆ.
ಮನೆಯಲ್ಲಿದ್ದ ರಾಘವ ಗೌಡ, ಪತ್ನಿ, ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಕಂದಾಯ ಅಧಿಕಾರಿ ಮಂಜುನಾಥ್, ಸಹಾಯಕ ರಘುನಾಥ್ ಸ್ಥಳೀಯರು ಭೇಟಿ ನೀಡಿದ್ದಾರೆ.

Leave a Reply

error: Content is protected !!