ನೇಸರ ಜ13:ಕಡಬ ಸರಕಾರಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಸ್ವಾಮಿ ವಿವೇಕಾನಂದರ 159ನೇ ಜನ್ಮ ದಿನಾಚರಣೆಯ ಪ್ರಯುಕ್ತ “ಯುವಜನ ದಿನಾಚರಣೆ”ಯನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಜನಾರ್ದನ ಕೆ.ಎನ್ ಸ್ವಾಮಿ ವಿವೇಕಾನಂದರ ಜೀವನ,ಚಿಂತನೆಗಳು ಮತ್ತು ಅವರು ವ್ಯಕ್ತಿತ್ವ ಯುವ ಜನಾಂಗಕ್ಕೆ ಮಾದರಿ ಹಾಗೂ ಅವರ ಆದರ್ಶಗಳನ್ನು ಪಾಲಿಸುವಂತೆ ಕರೆ ನೀಡಿದರು.ಉಪನ್ಯಾಸಕರಾದ ವಾಸುದೇವ ಗೌಡ ಸ್ವಾಮಿ ವಿವೇಕಾನಂದರ ಕುರಿತು ಉಪನ್ಯಾಸ ನೀಡಿದರು.ಉಪನ್ಯಾಸಕರಾದ ಸುಕೇಶ ಚಂದ್ರಶೇಖರ ಪ್ರಾಸ್ತಾವಿಕ ಭಾಷಣ ಮಾಡಿದರು.ಕಾರ್ಯಕ್ರಮಾಧಿಕಾರಿ ಸಲೀನ್ ಕೆ.ಪಿ ರಾಷ್ಟೀಯ ಸೇವಾ ಯೋಜನೆಗೆ ಸ್ವಾಮಿ ವಿವೇಕಾನಂದರ ವ್ಯಕ್ತಿತ್ವ ಮತ್ತು ಚಿಂತನೆಗಳು ಪ್ರೇರಣೆಯಾಗಿದೆ ಎಂದರು. ಎನ್.ಎಸ್ ಎಸ್ ಸ್ವಯಂಸೇವಕ ಸೇವೆಗಳು ಶ್ಲಾಘನೀಯ ಎಂದರು.
ಉಪನ್ಯಾಸಕರಾದ ಮಹದೇವಶೆಟ್ಟಿ,ಶ್ರೀಮತಿ ಭಾರತಿ,ಎನ್ ಎಸ್ ಎಸ್ ಘಟಕದ ನಾಯಕ ದಯಾನಂದ ಮತ್ತು ನಾಯಕಿ ಸರಿತಾ.ಪಿ.ಟಿ ವೇದಿಕೆಯಲ್ಲಿದ್ದರು.
ಕುಮಾರಿ ವರ್ಷಾ ಸ್ವಾಗತಿಸಿದರು,ಕುಮಾರಿ ಚೇತನಾ ವಂದಿಸಿದರು,ಕುಮಾರಿ ಸಂದ್ಯಾ ನಿರೂಪಿಸಿದರು.