ಎನ್ನೆಂಸಿಯ ಕಾಲೇಜು ವಾರ್ತಾಪತ್ರ “ವಿದ್ಯಾಚೇತನ” ದ ಅನಾವರಣ

ಶೇರ್ ಮಾಡಿ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ವಾರ್ತಾಪತ್ರ “ವಿದ್ಯಾಚೇತನ”ದ ಅನಾವರಣ ಕಾರ್ಯಕ್ರಮ ಕಾಲೇಜಿನಲ್ಲಿ ನಡೆಯಿತು.

ಕಾಲೇಜಿನ ಪ್ರಾಂಶುಪಾಲ ರುದ್ರಕುಮಾರ್ ಎಂ.ಎಂ ವಾರ್ತಾಪತ್ರವನ್ನು ಅನಾವರಣಗೊಳಿಸಿ ಮಾತನಾಡಿ, ಕಾಲೇಜಿನಲ್ಲಿ ಹಮ್ಮಿಕೊಳ್ಳುವ ಕಾರ್ಯಚಟುವಟಿಕೆಗಳ ದಾಖಲೆಯ ದೃಷ್ಟಿಯಲ್ಲಿ ವಾರ್ತಾಪತ್ರ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿ, ಇದು ಹೊರಬರಲು ಶ್ರಮಿಸಿದ ಸಂಪಾದಕ ಮಂಡಳಿಯನ್ನು ಶ್ಲಾಘಿಸಿದರು.

ವಾರ್ತಾಪತ್ರದ ಕಾರ್ಯನಿರ್ವಾಹಕ ಸಂಪಾದಕಿ ಡಾ.ಅನುರಾಧಾ ಕುರುಂಜಿ ಪ್ರಾಸ್ತಾವಿಕವಾಗಿ ಮಾತನಾಡಿ ವಾರ್ತಾಪತ್ರ ಹೊರಬರುವಲ್ಲಿ ಸಹಕರಿಸಿದ ಆಡಳಿತ ಮಂಡಳಿ, ಪ್ರಾಂಶುಪಾಲರು, ಸಹೋದ್ಯೋಗಿ ಮಿತ್ರರು, ಸಂಪಾದಕ ಮಂಡಳಿಯವರನ್ನು ನೆನಪಿಸಿದರು.
ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರತ್ನಾವತಿ.ಡಿ, ಐಕ್ಯೂಎಸಿ ಸಂಚಾಲಕಿ ಮಮತಾ.ಕೆ, ಕಛೇರಿ ಅಧೀಕ್ಷಕಿ ನಿವೇದಿತಾ.ಎಂ, ಸಂಪಾದಕ ಮಂಡಳಿಯ ಸದಸ್ಯರಾದ ರಂಜಿತಾ ಬಿ.ಆರ್, ಡಾ.ವಿಜಯಲಕ್ಷ್ಮಿ ಎನ್.ಎಸ್, ಹರ್ಷಕಿರಣ ಬಿ.ಆರ್, ಮೀನಾಕ್ಷಿ, ಕಛೇರಿ ಸಿಬ್ಬಂದಿ ಪವನ್ ಉಪಸ್ಥಿತರಿದ್ದರು.

Leave a Reply

error: Content is protected !!