ನೆಲ್ಯಾಡಿ: ಚಾಲಕನ ನಿಯಂತ್ರಣ ತಪ್ಪಿ ಹಣ್ಣಿನ ಲಾರಿ ಕಂದಕಕ್ಕೆ; ಪ್ರಾಣಪಾಯದಿಂದ ಪಾರು

ಶೇರ್ ಮಾಡಿ

ನೆಲ್ಯಾಡಿ : ರಾಷ್ಟ್ರೀಯ ಹೆದ್ದಾರಿ 75ರ ಬೆಂಗಳೂರು ಮಂಗಳೂರಿನ ಮಧ್ಯೆ ನೆಲ್ಯಾಡಿ ಸಮೀಪದ ಎಂಜಿರ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಹಣ್ಣಿನ ಲಾರಿಯೊಂದು ರಸ್ತೆ ಯ ಪಕ್ಕದ ಕಂದಕಕ್ಕೆ ಬಿದ್ದ ಘಟನೆ ಇಂದು (ಜು .9)ಮುಂಜಾನೆ ಸಂಭವಿಸಿದೆ.

ಹಾಸನದಿಂದ ಮಂಗಳೂರಿಗೆ ಹಣ್ಣುಗಳನ್ನು ಹೊತ್ತೊಯ್ದ ಲಾರಿ ಎಂಜಿರ ಸಮೀಪಿಸುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿ ಇರುವ ಕಂದಕಕ್ಕೆ ಬಿದ್ದಿದೆ.
ಲಾರಿಯಲ್ಲಿ ಚಾಲಕ ಹಾಗೂ ಕ್ಲೀನರ್ ಇಬ್ಬರೂ ಇದ್ದು ಅದೃಷ್ಟವಶಾತ್ ಪಾರಾಗಿದ್ದಾರೆ.

ಇದೇ ಪ್ರದೇಶದಲ್ಲಿ ಜೂನ್ 17ರಂದು ಬೆಂಗಳೂರು ಆರ್ ಟಿ ನಗರದ ನಿವಾಸಿಗಳು ಮಂಗಳೂರಿಗೆ ಪ್ರಯಾಣಿಸುತ್ತಿದ್ದ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ ಕಂದಕಕ್ಕೆ ಬಿದ್ದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಏಳು ಜನ ಪ್ರಯಾಣಿಕರ ಪೈಕಿ ಮಗು ಹೊರತುಪಡಿಸಿ ಆರು ಮಂದಿ ಗಂಭೀರ ಗಾಯಗೊಂಡ ಘಟನೆ ಸಂಭವಿಸಿತ್ತು.

Leave a Reply

error: Content is protected !!