ನೆಲ್ಯಾಡಿ ಶ್ರೀರಾಮ ವಿದ್ಯಾಲಯ ಸೂರ್ಯನಗರ; ಶಾಲಾ ಸಂಸತ್ತಿನ ಉದ್ಘಾಟನಾ ಸಮಾರಂಭ

ಶೇರ್ ಮಾಡಿ

ನೆಲ್ಯಾಡಿ ಶ್ರೀರಾಮ ವಿದ್ಯಾಲಯ ಸೂರ್ಯನಗರ ದಿನಾಂಕ 11.07.2023 ಮಂಗಳವಾರ ಶಾಲಾ ಸಂಸತ್ತಿನ ಉದ್ಘಾಟನಾ ಸಮಾರಂಭವು ನಡೆಯಿತು.

ಕಾರ್ಯಕ್ರಮವನ್ನು ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷರು, ತಾಲೂಕು ಪಂಚಾಯತ್ ಮಾಜಿ ಸದಸ್ಯ ಭಾಸ್ಕರ ಇಚ್ಲಂಪಾಡಿ ಉದ್ಘಾಟಿಸಿ ನಾಯಕತ್ವದ ಗುಣಕ್ಕೆ ಶಿಸ್ತು ಮತ್ತು ಸಂಸ್ಕಾರ ಅಗತ್ಯ ಭಾರತ ಸಂಸ್ಕೃತಿ ಜೊತೆಗೆ ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳಬೇಕೆಂದು ಶುಭ ಹಾರೈಸಿದರು.
ದಿನಾಂಕ 1.7.2023 ರಂದು ರಂದು ವಿದ್ಯಾರ್ಥಿಗಳು ಮತ ಪತ್ರವಿಲ್ಲದೆ ಆಧುನಿಕ ವಿಧಾನವಾದ ಮೂಲಕ ಮತ ಚಲಾಯಿಸಿ ಶಾಲಾ ನಾಯಕರನ್ನು ಆಯ್ಕೆ ಮಾಡಿದರು.

ಶಾಲಾ ನಾಯಕನಾಗಿ ಚೇತನ್ ಮತ್ತು ಉಪನಾಯಕನಾಗಿ ಮದ್ವಿತ್ ಆಯ್ಕೆಯಾದರು.
ವಿದ್ಯಾರ್ಥಿ ನಾಯಕ ಅತಿಥಿಗಳ ಆಶೀರ್ವಾದ ಪಡೆದು ದೀಪವನ್ನು ಪಡೆದು ತನ್ನ ಜೊತೆ ಜವಾಬ್ದಾರಿ ಹೊತ್ತಿರುವ ಉಪನಾಯಕರಿಗೆ ದೀಪವನ್ನು ಹಸ್ತಾಂತರಿಸುವ ಮೂಲಕ ಭಾವನಾತ್ಮಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಆಯ್ಕೆಗೊಂಡ ವಿದ್ಯಾರ್ಥಿ ನಾಯಕರುಗಳಿಗೆ ಪ್ರಭು ಶ್ರೀರಾಮಚಂದ್ರನ ಹೆಸರಿನಲ್ಲಿ ಪ್ರತಿಜ್ಞೆಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಗಣೇಶ ವಾಗ್ಲೆ ಬೋಧಿಸಿದರು. ಕಾರ್ಯಕ್ರಮದಲ್ಲಿ ಆಡಳಿತ ಸಮಿತಿಯ ಸದಸ್ಯರಾದ ಬಾಲಕೃಷ್ಣ ಬಾಣಜಾಲು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಆಡಳಿತ ಸಮಿತಿಯ ಕೋಶಾಧಿಕಾರಿಗಳಾದ ಜಿನ್ನಪ್ಪ ಪೂವಜೆ ಹಾಗೂ ಶಾಲಾ ಮುಖ್ಯೋಪಾಧ್ಯಾಯರು ಉಪಸ್ಥಿತರಿದರು.
ಶ್ರೀಮತಿ ವಿನ್ಯಶ್ರೀ ಮಾತಾಜಿ ಸ್ವಾಗತಿಸಿದರು. ಕುಮಾರಿ ಯಶಸ್ವಿನಿ ಧನ್ಯವಾದ ವಿತ್ತರೂ, ಅನಿಲ್ ಅಕ್ಕಪಾಡಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಕೋಮಲಾಂಗಿ ಮಾತಾಜಿ ಕಾರ್ಯಕ್ರಮ ಸಂಘಟಿಸಿದರು.

Leave a Reply

error: Content is protected !!