ಉಪ್ಪಿನಂಗಡಿ ಠಾಣಾ ಹೆಡ್ ಕಾನ್ಸ್ಟೇಬಲ್ ಕೃಷ್ಣಪ್ಪ ನಾಯ್ಕ್ ಅನಾರೋಗ್ಯದಿಂದ ನಿಧನ

ಶೇರ್ ಮಾಡಿ

ಉಪ್ಪಿನಂಗಡಿ: ಅನಾರೋಗ್ಯದಿಂದಾಗಿ ಉಪ್ಪಿನಂಗಡಿ ಠಾಣಾ ಹೆಡ್ ಕಾನ್ಸ್ಟೇಬಲ್ ಕೃಷ್ಣಪ್ಪ ನಾಯ್ಕ್ ಜಿ ರವರು ಜು.12 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೂಲತಃ ಮಾಣಿ ಸಮೀಪದ ನೇರಳಕಟ್ಟೆ ನಿವಾಸಿಯಾಗಿರುವ ಕೃಷ್ಣಪ್ಪ ರವರು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ಸುಮಾರು 6 ವರ್ಷಗಳಿಂದ ಕರ್ತವ್ಯ ನಿರ್ವಹಿಸಿಕೊಂಡಿದ್ದರು. ಅನಾರೋಗ್ಯದಿಂದಾಗಿ ಅವರು ಕಳೆದ ಒಂದು ವರ್ಷಗಳಿಂದ ರಜೆಯಲ್ಲಿದ್ದರು.
ಕೃಷ್ಣಪ್ಪ ರವರು ಪೊಲೀಸ್ ಇಲಾಖೆಯಲ್ಲಿ ಸುಮಾರು 26 ವರುಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದರು.

ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

error: Content is protected !!