ನೆಲ್ಯಾಡಿ : ಶ್ರೀ ಉಮಾಮಹೇಶ್ವರ ಯಕ್ಷಕಲಾ ಇಷುಧಿ ನಿಡ್ಲೆ ಇವರಿಂದ ಯಕ್ಷವಚೋ ವೈಭವ

ಶೇರ್ ಮಾಡಿ
ಈಶ್ವರಪ್ರಸಾದ್ ಪಿ ವಿ ಶಾಸ್ತ್ರೀ ,ಕುರಿಹಿತ್ಲು

ಈಶ್ವರಪ್ರಸಾದ್ ಪಿ ವಿ ಶಾಸ್ತ್ರೀ ಅವರು ಮೂವತ್ತು (30) ವರ್ಷಗಳಿಂದ ಯಕ್ಷಗಾನ ಕಲಾವಿದರಾಗಿದ್ದು , ಇಚ್ಲಂಪಾಡಿ ಬೀಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕನಾಗಿದ್ದರೂ ದೀರ್ಘ ಕಾಲದ ಯಕ್ಷಗಾನ ನಂಟು ಬಿಡಲು ಸಾಧ್ಯ ಇಲ್ಲದೆ ಯಕ್ಷಗಾನ, ತಾಳಮದ್ದಳೆ ಹೀಗೆ ಹವ್ಯಾಸಿಯಾಗಿ ಯಕ್ಷರಂಗದಲ್ಲಿ ಮೆರೆದಾಡಿದ ಸವ್ಯಸಾಚಿ ಕಲಾವಿದ .6 ವರ್ಷದ ಹಿಂದೆ ಸ್ಥಾಪಿಸಿದ ಶ್ರೀ ಉಮಾಮಹೇಶ್ವರ ಯಕ್ಷಕಲಾ ಇಷುಧಿ ಕುರಿಹಿತ್ಲು – ನಿಡ್ಲೆ ಈ ಹೆಸರಿಂದ ಬೇರೆ ಊರುಗಳಲ್ಲಿ ಕಾರ್ಯಕ್ರಮ ನಡೆಸಿರುತ್ತಾರೆ . ಕೊರೋನಾ ಪೂರ್ವ ಮುಂಬೈ ಮಹಾನಗರದಲ್ಲಿ ನಡೆದ ಯಕ್ಷ ವಚೋ ವೈಭವ ಎಂಬ ಸಪ್ತಾಹ (7ದಿನ )ಅಪಾರ ಜನ ಮನ್ನಣೆ ಪಡೆದಿತ್ತು.

ದಿನಾಂಕ 22/7/23 ರಂದು ಸಂಜೆ 4 ಗಂಟೆಯಿಂದ 7 ರ ವರೆಗೆ ನೆಲ್ಯಾಡಿ ಸುಬ್ರಮಣ್ಯ ವಿಲಾಸ ಹೋಟೆಲ್ ಹಾಲ್ ನಲ್ಲಿ ಕೆ ಎಂ ನಂಬಿಯಾರ್ ವಿರಚಿತ ಪ್ರಸಂಗ  ಕಲಿ ಪ್ರವೇಶ – ಸರ್ಪಾಧ್ವರ ಯಕ್ಷ ವಚೋ ವೈಭವ ನಡೆಯಲಿದೆ. ಹಾಲ್ ವ್ಯವಸ್ಥೆ ಹೋಟೆಲ್ ಮಾಲಕರಿಂದ. ಉಳಿದಂತೆ ಕಲಾವಿದರ ಸಂಭಾವನೆ, ಧ್ವನಿವರ್ಧಕ, ಟಿಫನ್ ಇನ್ನಿತರೇ ಖರ್ಚುಗಳನ್ನು ಶ್ರೀ ಉಮಾಮಹೇಶ್ವರ ಯಕ್ಷಕಲಾ ಇಷುಧಿ ಕುರಿಹಿತ್ಲು- ನಿಡ್ಲೆ ಯವರಿಂದ ಭರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕಲಾಭಿಮಾನಿಗಳಾದ ಸಹೃದಯಿ ದಾನಿಗಳೇ ಕಲಾ ಪ್ರೀತಿಯಿಂದ,ಕಲಾವಿದರ ಮೇಲೆ ಅಭಿಮಾನ ಇರಿಸಿ ಆರ್ಥಿಕವಾಗಿ ಸಹಕಾರ ಮಾಡುವುದರೊಂದಿಗೆ ಉಪಸ್ಥಿತರಿದ್ದು ಪ್ರೋತ್ಸಾಹ ಮಾಡಬೇಕೆಂದು ತಂಡವು ಆಗ್ರಹಿಸಿದೆ.ಮುಂಬರುವ ದಿನಗಳಲ್ಲಿ ಜೀವನ ಸಂದೇಶ ಸಾರುವ ಮಹಾಭಾರತ ಸರಣಿ ಮಾಡುವ ಇರಾದೆ ಹೊಂದಿರುತ್ತಾರೆ .

ಆರ್ಥಿಕ ಸಹಕಾರಕ್ಕಾಗಿ:👇

ಈಶ್ವರಪ್ರಸಾದ್ ಪಿ ವಿ ಶಾಸ್ತ್ರೀ ಯಕ್ಷಗಾನ ಕಲಾವಿದರು. ಬೀಡು ದುರ್ಗಾಪರಮೇಶ್ವರಿ ದೇವಸ್ಥಾನ ಅರ್ಚಕರು

BANK :UNION BANK OF INDIA,NELLYADI 

ACCOUNT NUMBER:072722010001070

IFSC CODE: UBIN0907278

PHONE PAY:9591784262

ಸ್ಥಳ :👇

ನೆಲ್ಯಾಡಿ ಸುಬ್ರಮಣ್ಯ ವಿಲಾಸ ಹೋಟೆಲ್ ಹಾಲ್

Leave a Reply

error: Content is protected !!