ಶಿಶುವಿಹಾರದಲ್ಲಿ 25 ಮಕ್ಕಳಿಗೆ ವಿಷವುಣಿಸಿದ ಶಿಕ್ಷಕಿಗೆ ಗಲ್ಲು

ಶೇರ್ ಮಾಡಿ

ಚೀನಾದ ಶಿಶುವಿಹಾರದ ಶಿಕ್ಷಕಿಯೊಬ್ಬಳು 25 ಮಕ್ಕಳಿಗೆ ವಿಷವುಣಿಸಿದ್ದು, ಒಂದು ಮಗುವಿನ ಸಾವಿಗೆ ಕಾರಣವಾಗಿದ್ದು ಆಕೆಯನ್ನು ಶುಕ್ರವಾರ ಗಲ್ಲಿಗೇರಿಸಲಾಗಿದೆ ಎಂದು ಮಧ್ಯ ಚೀನಾದ ನ್ಯಾಯಾಲಯ ಹೇಳಿದೆ.
ಹೆನಾನ್ ಪ್ರಾಂತ್ಯದ ಜಿಯಾಜುವೊ ನಗರದ ನಂ.1 ಮಧ್ಯಂತರ ನ್ಯಾಯಾಲಯದ ಹೊರಗೆ ಪೋಸ್ಟ್ ಮಾಡಲಾದ ನೋಟೀಸ್ ನಲ್ಲಿ ವಾಂಗ್ ಯುನ್‌ನ ಶಿಕ್ಷೆಯನ್ನು ಗುರುವಾರ ಜಾರಿಗೊಳಿಸಲಾಗಿದೆ ಎಂದು ಹೇಳಿದೆ.
ಮಾರ್ಚ್ 27, 2019 ರಂದು ಮೆಂಗ್‌ಮೆಂಗ್ ಪ್ರಿ-ಸ್ಕೂಲ್ ನಲ್ಲಿ ಮಕ್ಕಳಿಗೆ ನೀಡಲಾದ ಆಹಾರದಲ್ಲಿ ವಿಷಕಾರಿ ಸೋಡಿಯಂ ನೈಟ್ರೈಟ್ ಅನ್ನು ಹಾಕಿದ್ದಕ್ಕಾಗಿ 40 ವರ್ಷದ ವಾಂಗ್‌ ಳನ್ನು ತಪ್ಪಿತಸ್ಥಳೆಂದು ನಿರ್ಣಯಿಸಲಾಯಿತು. ವಿದ್ಯಾರ್ಥಿಗಳು ತಕ್ಕಮಟ್ಟಿಗೆ ಶೀಘ್ರವಾಗಿ ಚೇತರಿಸಿಕೊಂಡಿದ್ದರೂ, ಒಬ್ಬ ವಿದ್ಯಾರ್ಥಿ 10 ತಿಂಗಳ ಚಿಕಿತ್ಸೆಯ ನಂತರ ಬಹು ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿದ್ದಾನೆ.
ಎರಡು ವರ್ಷಗಳ ಹಿಂದೆ ಆನ್‌ಲೈನ್‌ನಲ್ಲಿ ಖರೀದಿಸಿದ ವಿಷಕಾರಿ ವಸ್ತುವಿನೊಂದಿಗೆ ತನ್ನ ಪತಿಗೆ ವಿಷವನ್ನು ನೀಡಿದ್ದಳು. ಅವರು ಬದುಕುಳಿದಿದ್ದರು ಎಂದು ಕೋರ್ಟ್ ಹೇಳಿದೆ. ಅವಳು ತನ್ನ ಪತಿ ಮತ್ತು ವಿದ್ಯಾರ್ಥಿಗಳನ್ನು ಕೊಲ್ಲಲು ಅಥವಾ ಅನಾರೋಗ್ಯಕ್ಕೆ ಒಳಗಾಗಲು ಉದ್ದೇಶಿಸಿದ್ದಳೇ ಎಂಬುದು ಸ್ಪಷ್ಟವಾಗಿಲ್ಲ.
ಉದ್ದೇಶಪೂರ್ವಕ ಹಾನಿಗಾಗಿ ಆಕೆಯನ್ನು ಆರಂಭದಲ್ಲಿ ಒಂಬತ್ತು ತಿಂಗಳ ಜೈಲು ಶಿಕ್ಷೆಗೆ ಗುರಿಪಡಿಸಲಾಗಿತ್ತು. ಆದರೆ ಶಿಕ್ಷೆಯನ್ನು ನಂತರ ಮರಣ ದಂಡನೆಗೆ ಪರಿವರ್ತಿಸಲಾಯಿತು. ವಾಂಗ್‌ನ ಮನವಿಯನ್ನು ನ್ಯಾಯಾಲಯವು ತಿರಸ್ಕರಿಸಿ ಮರಣದಂಡನೆ ವಿಧಿಸಲಾಗಿದೆ.

Leave a Reply

error: Content is protected !!