ಜುಲೈ 17 ರಿಂದ ಪದವಿ ಕಾಲೇಜುಗಳ 1st ಸೆಮಿಸ್ಟರ್ ಆರಂಭ..2023-24ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಇಲ್ಲಿದೆ

ಶೇರ್ ಮಾಡಿ

2023-24 ನೇ ಸಾಲಿನ ರಾಜ್ಯದ ಎಲ್ಲ ಸರ್ಕಾರಿ, ಖಾಸಗಿ ವಿಶ್ವವಿದ್ಯಾಲಯಗಳು ಹಾಗೂ ಅವುಗಳ ಸಂಯೋಜಿತ ಕಾಲೇಜುಗಳಲ್ಲಿ, ಪದವಿ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆ, ಪರೀಕ್ಷೆ ಮತ್ತು ಫಲಿತಾಂಶ ಪ್ರಕಟಣೆಗೆ ಉನ್ನತ ಶಿಕ್ಷಣ ಇಲಾಖೆ ಏಕರೂಪ ಶೈಕ್ಷಣಿಕ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಈ ವೇಳಾಪಟ್ಟಿಯಂತೆ ಇದೇ ಸೋಮವಾರದಂದು ಅಂದರೆ ಜುಲೈ 17,2023 ರಿಂದ ಶೈಕ್ಷಣಿಕ ತರಗತಿಗಳು ಆರಂಭವಾಗಲಿವೆ.
2023-24 ನೇ ಸಾಲಿನ ಪ್ರಥಮ, ಮೂರನೇ ಹಾಗೂ ಐದನೇ ಸೆಮಿಸ್ಟರ್ ಪ್ರವೇಶ ಪ್ರಕ್ರಿಯೆ ಮೇ 22, 2023 ರಿಂದ ಜುಲೈ 15, 2023 ರೊಳಗೆ ಪೂರ್ಣಗೊಳಿಸಬೇಕು. ಜುಲೈ 17 ರಿಂದ ತರಗತಿಗಳನ್ನು ಆರಂಭಿಸುವಂತೆ ಉನ್ನತ ಶಿಕ್ಷಣ ಇಲಾಖೆ ಸೂಚಿಸಿದೆ.

ಜುಲೈ 17, 2023 ರಿಂದ ಆರಂಭವಾಗುವ ಸೆಮಿಸ್ಟರ್ ತರಗತಿಗಳು ನವೆಂಬರ್ 18, 2023 ಕ್ಕೆ ಮುಕ್ತಾಯವಾಗಲಿವೆ. ನವೆಂಬರ್ 20 ರಿಂದ ಮೊದಲನೇ, ಮೂರನೇ ಹಾಗೂ ಐದನೇ ಸೇಮಿಸ್ಟರ್ ಪರೀಕ್ಷೆಗಳನ್ನು ಆರಂಭಿಸಿ 2024ರ ಜನವರಿ 15 ರೊಳಗೆ ಮೌಲ್ಯಮಾಪನ ಮುಗಿಸಿ ಫಲಿತಾಂಶವನ್ನು ಪ್ರಕಟಿಸುವಂತೆ ಸೂಚಿಸಿದೆ.

ಜನವರಿ 16 ರಿಂದ ಎರಡನೇ ಸೆಮಿಸ್ಟರ್ ತರಗತಿಗಳನ್ನು ಆರಂಭಿಸಿ ಮೇ 15ಕ್ಕೆ ಮುಕ್ತಾಯಗೊಳಿಸಬೇಕು. ಮೇ 13 ರಿಂದ ಎರಡನೇ ಸೆಮಿಸ್ಟರ್ ಪರೀಕ್ಷೆಗಳನ್ನು ಆರಂಭಿಸಿ ಜೂನ್ 19 ರೊಳಗೆ ಫಲಿತಾಂಶವನ್ನು ಪ್ರಕಟಿಸಬೇಕು ಎಂದು ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳು, ಪದವಿ ಕಾಲೇಜುಗಳಿಗೆ ಸೂಚಿಸಲಾಗಿದೆ.

ಈ ವೇಳಾಪಟ್ಟಿ ಇಂಜಿನಿಯರಿಂಗ್, ಡಿಪ್ಲೋಮಾ ಇತರೆ ತಾಂತ್ರಿಕ ಶಿಕ್ಷಣ ಕೋರ್ಸ್‌ಗಳಿಗೆ ಅನ್ವಯಿಸುವುದಿಲ್ಲ ಎಂದು ಉನ್ನತ ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.

2023-24 ನೇ ಸಾಲಿನ ಪದವಿ ಕಾಲೇಜುಗಳ ಶೈಕ್ಷಣಿಕ ವೇಳಾಪಟ್ಟಿ
ಪ್ರಥಮ ಸೆಮಿಸ್ಟರ್ ಪ್ರವೇಶ ಪ್ರಕ್ರಿಯೆ ಆರಂಭ- ಮೇ 22, 2023.
ಪ್ರಥಮ ಸೆಮಿಸ್ಟರ್ ಪ್ರವೇಶ ಪ್ರಕ್ರಿಯೆ ಅಂತಿಮ ದಿನಾಂಕ- ಜುಲೈ 15, 2023.
ಪ್ರಥಮ /ಮೂರನೇ/ಐದನೇ ಸೆಮಿಸ್ಟರ್ ತರಗತಿ ಆರಂಭ ದಿನಾಂಕ – ಜುಲೈ 17, 2023.
ಪ್ರಥಮ /ಮೂರನೇ/ಐದನೇ ಸೆಮಿಸ್ಟರ್ ತರಗತಿಗಳು ಮುಕ್ತಾಯ ದಿನಾಂಕ – ನವೆಂಬರ್ 18, 2023.
ಮೊದಲನೇ, ಮೂರನೇ ಹಾಗೂ ಐದನೇ ಸೇಮಿಸ್ಟರ್ ಪರೀಕ್ಷೆಗಳು ಆರಂಭ ದಿನಾಂಕ- ನವೆಂಬರ್ 20, 2023 ರಿಂದ ಆರಂಭ.
ಜನವರಿ 15 ರೊಳಗೆ ಮೌಲ್ಯಮಾಪನ ಮುಗಿಸಿ ಫಲಿತಾಂಶವನ್ನು ಪ್ರಕಟಣೆ.
ಜನವರಿ 16 ರಿಂದ ಎರಡನೇ ಸೆಮಿಸ್ಟರ್ ತರಗತಿಗಳು ಆರಂಭ.
ಮೇ 15ಕ್ಕೆ ಎರಡನೇ, ನಾಲ್ಕನೇ ಮತ್ತು ಆರನೇ ಸೆಮಿಸ್ಟರ್ ತರಗತಿಗಳು ಮುಕ್ತಾಯ.
ಎರಡನೇ, ನಾಲ್ಕನೇ ಮತ್ತು ಆರನೇ ಸೆಮಿಸ್ಟರ್ ಪರೀಕ್ಷೆ ಆರಂಭ ದಿನಾಂಕ – ಮೇ 13.
ಜೂನ್ 19 ರೊಳಗೆ ಎರಡನೇ, ನಾಲ್ಕನೇ ಮತ್ತು ಆರನೇ ಸೆಮಿಸ್ಟರ್ ಫಲಿತಾಂಶ ಪ್ರಕಟ.

Leave a Reply

error: Content is protected !!