ಪ್ರಯಾಣಿಕರ ವಸ್ತ್ರ ಒಣಗಿಸಲೂ ಸರಕಾರಿ ಬಸ್‌.! ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್.!

ಶೇರ್ ಮಾಡಿ

ಮೊದಲೆಲ್ಲ ದೂರ ಸಂಚಾರದ ಸರಕಾರಿ ಬಸ್‌ಗಳ ಒಳಗಡೆ ಚಾಲಕ, ನಿರ್ವಾಹಕರ ವಸ್ತ್ರಗಳನ್ನು ಒಣಗಲು ಹಾಕಿರುವುದನ್ನು ನೋಡುತ್ತಿದ್ದೆವು. ಆದರೆ ಇಂದು ಕಾಲಿಗೆ ಚಕ್ರ ಕಟ್ಟಿ ಕೊಂಡಂತೆ ಉಚಿತ ಪ್ರಯಾಣದ ಕೊಡುಗೆಯನ್ನು ಅನುಭವಿಸುತ್ತಿರುವ ಮಹಿಳೆಯರು ತಮ್ಮ ವಸ್ತ್ರಗಳನ್ನೂ ಚಲಿಸುತ್ತಿರುವ ಬಸ್‌ನ ಕಿಟಕಿಗೆ ನೇತು ಹಾಕುವ ಮೂಲಕ ಒಣಗಿಸಲಾರಂಭಿಸಿದ್ದಾರೆ!
ಸೋಮವಾರ ಸುಬ್ರಹ್ಮಣ್ಯದಿಂದ ಕಾರವಾರಕ್ಕೆ ತೆರಳುತ್ತಿದ್ದ ಬಸ್ಸಿನಲ್ಲಿ ಮಹಿಳಾ ಯಾನಿಗಳು ಬಸ್ಸಿನ ಕಿಟಕಿಗಳಲ್ಲಿ ವಸ್ತ್ರಗಳನ್ನು ಒಣಗಲು ಹಾಕಿರುವ ದೃಶ್ಯಗಳು ಕಂಡುಬಂದಿದೆ. ಆ ದೃಶ್ಯವನ್ನು ಯಾರೋ ಮೊಬೈಲ್‌ ಮೂಲಕ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ!

Leave a Reply

error: Content is protected !!